ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಅನಿವಾರ್ಯ. ಇಲ್ಲಿಯವರೆಗೆ 32.71 ಕೋಟಿ ಪಾನ್-ಆಧಾರ್ ಜೊತೆ ಲಿಂಕ್ ಆಗಿದೆ.ಇನ್ನೂ ಪಾನ್ ಜೊತೆ ಆಧಾರ್ ಲಿಂಕ್ ಮಾಡಿಲ್ಲದವರಿಗೆ ಈಗ್ಲೂ ಅವಕಾಶವಿದೆ. ಮಾರ್ಚ್ 31, 2021ರವರೆಗೆ ಪಾನ್-ಆಧಾರ್ ಲಿಂಕ್ ಗೆ ಅವಕಾಶವಿದೆ.ಈ ಬಗ್ಗೆ ಮೈ ವಿಲೇಜ್ ಇಂಡಿಯಾ ಮತ್ತೊಮ್ಮೆ ಟ್ವೀಟ್ ಮಾಡಿದೆ.
ಒಂದು ವೇಳೆ ಮಾರ್ಚ್ 31ರ ನಂತ್ರವೂ ಆಧಾರ್-ಪಾನ್ ಲಿಂಕ್ ಮಾಡಿಲ್ಲವೆಂದ್ರೆ ಆದಾಯ ತೆರಿಗೆ ಇಲಾಖೆಯ ಪ್ರಕಾರ,ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.ಸುಮಾರು 18 ಕೋಟಿ ಮಂದಿ ಇನ್ನೂ ಈ ಕೆಲಸ ಮಾಡಿಲ್ಲ ಎನ್ನಲಾಗ್ತಿದೆ. ಮೈ ವಿಲೇಜ್ ಇಂಡಿಯಾ ಮತ್ತೊಂದು ಟ್ವೀಟ್ ಮಾಡಿದೆ. ಅದ್ರಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ ಮಾಹಿತಿ ನೀಡಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಶೇಕಡಾ 57ರಷ್ಟು ಮಂದಿ ಆದಾಯವು 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿದೆಯಂತೆ. ಅಂಕಿಅಂಶಗಳ ಪ್ರಕಾರ,ಶೇಕಡಾ 18 ರಷ್ಟು ಮಂದಿ ಆದಾಯ 2.5 ರಿಂದ 5 ಲಕ್ಷ ರೂಪಾಯಿಗಳು, ಶೇಕಡಾ 17ರಷ್ಟು ಮಂದಿ ಆದಾಯವು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗಳು ಮತ್ತು ಶೇಕಡಾ ಏಳರಷ್ಟು ಮಂದಿ ಆದಾಯವು 10 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗಳವರೆಗೆ ಇದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರಲ್ಲಿ ಕೇವಲ ಶೇಕಡಾ ಒಂದರಷ್ಟು ಮಾತ್ರ 50 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ.