alex Certify ʼರಂಜಾನ್ʼ‌ ನಲ್ಲಿ ತಯಾರಾಗುತ್ತೆ ಈ ಎಲ್ಲ ಭಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಂಜಾನ್ʼ‌ ನಲ್ಲಿ ತಯಾರಾಗುತ್ತೆ ಈ ಎಲ್ಲ ಭಕ್ಷ್ಯ

ಇಸ್ಲಾಂ ಧರ್ಮದ ಪವಿತ್ರ ತಿಂಗಳು ಶುರುವಾಗಿದೆ. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ರೋಜಾ ಮಾಡ್ತಾರೆ. ಸ್ವತಃ ಆತ್ಮ ಸಂಯಮ ಹೆಚ್ಚಿಸಿಕೊಳ್ಳಲು ಮುಸ್ಲಿಂ ಬಾಂಧವರು ರಂಜಾನ್ ತಿಂಗಳಿನಲ್ಲಿ ಉಪವಾಸ ಮಾಡ್ತಾರೆ.

ಸೂರ್ಯೋದಯಕ್ಕಿಂತ ಮೊದಲೇ ಆಹಾರ ಸೇವನೆ ಮಾಡುವ ಮುಸ್ಲಿಂ ಬಾಂಧವರು ಸೂರ್ಯೋದಯದ ನಂತ್ರ ಅನೇಕ ನಿಯಮಗಳನ್ನು ಪಾಲಿಸಿ ಸೂರ್ಯಾಸ್ತದ ನಂತ್ರ ಪ್ರಾರ್ಥನೆ ಮೂಲಕ ಉಪವಾಸ ಬಿಟ್ಟು ಆಹಾರ ಸೇವಿಸುತ್ತಾರೆ.

ಸಂಪ್ರದಾಯದಂತೆ ಕೆಲವರು ಖರ್ಜೂರದ ಮೂಲಕ ಉಪವಾಸ ಮುಗಿಸ್ತಾರೆ. ಪ್ರವಾದಿ ಮೊಹಮ್ಮದ್ ಕೂಡ ಮೂರು ಖರ್ಜೂರ ತಿಂದು ಉಪವಾಸ ಕೈಬಿಟ್ಟಿದ್ದರು ಎಂಬ ನಂಬಿಕೆಯಿದೆ.

ಸಾಂಪ್ರದಾಯಿಕವಾದ ಆಹಾರದಿಂದ ಹಿಡಿದು ರುಚಿಕರವಾದ ಮಾಂಸದ ಆಹಾರವನ್ನು ರಂಜಾನ್ ವೇಳೆ ಸೇವನೆ ಮಾಡಲಾಗುತ್ತದೆ. ಈ ಸಂದರ್ಭದ ಮೆನುವಿನಲ್ಲಿ ಏನಿರುತ್ತೆ ಎಂಬುದು ಕುಟುಂಬದ ಮೇಲೆ ಅವಲಂಬಿತವಾಗಿರುತ್ತದೆ. ಕಬಾಬ್, ಹಲಿಮ್, ಬಿರಿಯಾನಿ, ಹಲ್ವಾ ಸೇರಿದಂತೆ ಅನೇಕ ರುಚಿ ರುಚಿ ಆಹಾರ ಮೆನುವಿನಲ್ಲಿರುತ್ತದೆ.

ಚಿಕನ್ ಶಮ್ಮಿ ಕಬಾಬ್ : ಚಿಕನ್ ಹೋಳುಗಳನ್ನು ಚನ್ನಾ ದಾಲ್, ಮಸಾಲೆ ಮಿಶ್ರಣದ ಜೊತೆ ಮಿಕ್ಸ್ ಮಾಡಲಾಗುತ್ತದೆ. ಗರಿಗರಿಯಾಗುವವರೆಗೆ ಹುರಿದು ಫ್ರೈ ಮಾಡಲಾಗುತ್ತದೆ.

ಕ್ಯಾರೆಟ್ ಹಲ್ವಾ : ಇಫ್ತಾರ್ ಕೊನೆಯಲ್ಲಿ ಬಾಯಿ ಸಿಹಿ ಮಾಡಿಕೊಳ್ಳುವುದು ಸಂಪ್ರದಾಯ. ಕ್ಯಾರೆಟ್ ಗೆ ಹಾಲು, ಸಕ್ಕರೆ, ಡ್ರೈ ಫ್ರೂಟ್ಸ್ ಸೇರಿಸಿ ಹಲ್ವಾ ಮಾಡಲಾಗುತ್ತದೆ.

ಕಾಬುಲಿ ಪಲಾವ್ : ಕಡಲೆ ಜೊತೆ ಅನ್ನವನ್ನು ಬೇಯಿಸಿ ಕಾಬುಲಿ ಪಲಾವ್ ತಯಾರಿಸಲಾಗುತ್ತದೆ.

ಪೇಪರ್ ಕಬಾಬ್, ಫಾಲಸಾ ಶರಬತ್, ದಮ್ ಬಿರಿಯಾನಿ, ಹಲೀಮ್ ಸೇರಿದಂತೆ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...