alex Certify ಬೇಸಿಗೆಯಲ್ಲಿ ಕುಡಿಯಲೇಬೇಕು ಈ ʼಪಾನೀಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಕುಡಿಯಲೇಬೇಕು ಈ ʼಪಾನೀಯʼ

ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು.

* ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು.

* ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು.

* ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ.

* ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ ಆಗಿರುವುದರಿಂದ ಇದರ ಸೇವನೆ ಹೃದಯಕ್ಕೆ ಅತ್ಯುತ್ತಮ.

* ಎಳೆನೀರಿನಲ್ಲಿ ಎಲೆಕ್ಟ್ರೋಲೈಟ್ ಮತ್ತು ಪೊಟ್ಯಾಷಿಯಂ ಅಂಶವಿರುವ ಹಿನ್ನೆಲೆಯಲ್ಲಿ ದೇಹವು ಸದಾ ಚೈತನ್ಯದಿಂದ ಕೂಡಿರುತ್ತದೆ.

* ಎಳೆನೀರಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಶಕ್ತಿ ಇರುವುದರಿಂದ ದೇಹದಲ್ಲಿ ಆಗುವ ಸಣ್ಣಪುಟ್ಟ ಇನ್ಫೆಕ್ಷನ್ ಗಳನ್ನು ಹೊಡೆದೋಡಿಸುತ್ತದೆ.

* ಎಳನೀರಿನಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಗಳು ಜಾಸ್ತಿ ಇರುವುದರಿಂದ ಇದನ್ನು ಸೇವಿಸಿದರೆ ಮೂಳೆಗಳಿಗೆ ಉತ್ತಮ.

* ಎಳನೀರು ಪ್ರತಿದಿನ ಕುಡಿಯುವ ಅಭ್ಯಾಸದಿಂದ ಮೂತ್ರಪಿಂಡದಲ್ಲಿ ಕಂಡುಬರುವ ಕಲ್ಲುಗಳು ನಿಯಂತ್ರಣವಾಗುತ್ತದೆ.

* ಎಳನೀರಿಗೆ ಕರುಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುವ ಶಕ್ತಿ ಇದೆ.

* ವಾರಕ್ಕೊಂದು ದಿನ ಬರಿ ಎಳನೀರನ್ನು ಸೇವಿಸಿ ಉಪವಾಸ ಮಾಡಿದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ.

* ಮುಂಜಾನೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವ ಅಭ್ಯಾಸ ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...