alex Certify ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ 9 ರೂ. ಏರಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ 9 ರೂ. ಏರಿಕೆ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕೊನೆಯ ಸುತ್ತಿನ ಮತದಾನ ಮಾರ್ಚ್ 7 ರಂದು ಕೊನೆಗೊಳ್ಳಲಿದೆ. ಇದಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲು ತೈಲ ಕಂಪನಿಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಿದೆ. ಮಾರ್ಚ್ 7 ರ ನಂತರ ಜನಸಾಮಾನ್ಯರ ಜೇಬು ಲೂಟಿಯಾಗಲಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕೊನೆಯ ಸುತ್ತಿನ ಮತದಾನ ಮಾರ್ಚ್ 7 ರಂದು ಮುಕ್ತಾಯವಾಗಲಿದೆ. ಅದರ ನಂತರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲು ಸರ್ಕಾರಿ ತೈಲ ಕಂಪನಿಗಳಿಗೆ ಗ್ರೀನ್ ಸಿಗ್ನಲ್ ನೀಡಲಿದ್ದು, ನಂತರ ತೈಲ ಕಂಪನಿಗಳು ಬೆಲೆಯನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ. ತೈಲ ಕಂಪನಿಗಳು ಸಾಮಾನ್ಯ ಮಾರ್ಜಿನ್ ಸಾಧಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 9 ರೂ ಹೆಚ್ಚಿಸಬಹುದು.

ವಾಸ್ತವವಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಬ್ಯಾರೆಲ್‌ಗೆ 110 ಡಾಲರ್ ಗೆ ತಲುಪಿದೆ, ಇದು 8 ವರ್ಷಗಳಲ್ಲಿ ಗರಿಷ್ಠ ಮಟ್ಟವಾಗಿದೆ. ರಷ್ಯಾದಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ 2014ರ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ ಗೆ 110 ಡಾಲರ್‌ಗೆ ತಲುಪಿದೆ. ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಸೆಲ್(PPAC) ಪ್ರಕಾರ, ಮಾರ್ಚ್ 1 ರಂದು ಭಾರತ ಖರೀದಿಸುವ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 102 ಡಾಲರ್ ಮೀರಿದೆ. ಈ ಇಂಧನ ಬೆಲೆ ಆಗಸ್ಟ್ 2014 ರ ನಂತರದ ಗರಿಷ್ಠವಾಗಿದೆ.

ಕಳೆದ ವರ್ಷದ ನವೆಂಬರ್ ಆರಂಭದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಿಸಿದಾಗ, ಸರಾಸರಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 81.5 ಡಾಲರ್ ನಷ್ಟಿತ್ತು. ಉತ್ತರ ಪ್ರದೇಶದಲ್ಲಿ ಏಳನೇ ಮತ್ತು ಅಂತಿಮ ಹಂತದ ಮತದಾನ ಮಾರ್ಚ್ 7 ರಂದು ನಡೆಯಲಿದೆ ಮತ್ತು ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ಐದು ರಾಜ್ಯಗಳ ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಚ್ಚಾ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 5 ರಿಂದ 7 ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿವೆ. ಜೆಪಿ ಮಾರ್ಗನ್ ಪ್ರಕಾರ, ತೈಲ ಕಂಪನಿಗಳು ಸಾಮಾನ್ಯ ಮಾರುಕಟ್ಟೆ ಲಾಭವನ್ನು ಸಾಧಿಸಲು ಚಿಲ್ಲರೆ ಬೆಲೆಗಳನ್ನು ಲೀಟರ್‌ಗೆ 9 ಅಥವಾ 10 ಪ್ರತಿಶತದಷ್ಟು ಹೆಚ್ಚಿಸಬೇಕಾಗಿದೆ. ಸತತ 118 ದಿನಗಳಿಂದ ದೇಶೀಯ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...