alex Certify ಬಾಲ್ಯದಲ್ಲಿ ಅಮ್ಮನ ಬಟ್ಟೆ ಧರಿಸುತ್ತಿದ್ದ WWE ರೆಸ್ಲರ್ ಈಗ ಟ್ರಾನ್ಸ್ ಜೆಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದಲ್ಲಿ ಅಮ್ಮನ ಬಟ್ಟೆ ಧರಿಸುತ್ತಿದ್ದ WWE ರೆಸ್ಲರ್ ಈಗ ಟ್ರಾನ್ಸ್ ಜೆಂಡರ್

ಡಬ್ಲ್ಯುಡಬ್ಲ್ಯು ಇ ಪಂದ್ಯಗಳಲ್ಲಿ ಅಭಿಮಾನಿಗಳನ್ನು ರಂಜಿಸಿರುವ ರೆಸ್ಲರ್ ಟೈಲರ್ ರೆಕ್ಸ್ ತಾನು ಟ್ರಾನ್ಸ್ ಜೆಂಡರ್ ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರನ್ನು ಗ್ಯಾಬಿ ಟಫ್ಟ್ ಎಂದು ಗುರುತಿಸಲಾಗುವುದು.

ಇನ್ಸ್ಟ್ರಾಗ್ರಾಮ್ ನಲ್ಲಿ ದೊಡ್ಡ ಪೋಸ್ಟ್ ಹಾಕಿದೆ ಗ್ಯಾಬಿ, ತಾನು ಟ್ರಾನ್ಸ್ ಜೆಂಡರ್ ಎಂಬ ವಿಷ್ಯವನ್ನು ಹೇಳಿದ್ದಾರೆ. 2009ರಿಂದ 2014ರವರೆಗೆ ಡಬ್ಲ್ಯುಡಬ್ಲ್ಯುಇನಲ್ಲಿ ಗ್ಯಾಬಿ ಸಕ್ರಿಯವಾಗಿದ್ದರು.

ಡಬ್ಲ್ಯುಡಬ್ಲ್ಯುಇ ಸ್ಟಾರ್, ಬಾಡಿ ಬಿಲ್ಡರ್, ಫಿಟ್ನೆಸ್ ಗುರು, ಮೋಟಿವೇಷನಲ್ ಸ್ಪೀಕರ್, ಮೋಟಾರ್‌ಸೈಕಲ್ ರೇಸರ್ ನಂತ್ರ ಈಗ ಮಹಿಳೆ ಜೀವನ ಶುರು ಮಾಡಿದ್ದೇನೆಂದು ಗ್ಯಾಬಿ ಹೇಳಿದ್ದಾರೆ. ಡಬ್ಲ್ಯಡಬ್ಲ್ಯುಇ ರಿಂಗ್ ನಲ್ಲಿ ಸ್ಪರ್ಧೆ ನಡೆಸುತ್ತಿದ್ದ ಗ್ಯಾಬಿ ಮನಸ್ಸಿನಲ್ಲಿ ಗೊಂದಲವೊಂದು ಮನೆ ಮಾಡಿತ್ತು. ಈಗ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

2014ರಲ್ಲಿ ಡಬ್ಲ್ಯಡಬ್ಲ್ಯುಇ ಬಿಟ್ಟಿದ್ದ ಗ್ಯಾಬಿ, ಫಿಟ್ನೆಸ್ ಗುರುವಾಗಿದ್ದರು. ಆದ್ರೆ ಕಳೆದ 8 ತಿಂಗಳಲ್ಲಿ ಸಾಕಷ್ಟು ಗೊಂದಲವನ್ನು ಎದುರಿಸಿದ್ದರು. ತನ್ನ ಬಗ್ಗೆ ಜನರು ಏನು ಹೇಳ್ತಾರೆಂಬ ಭಯ ಅವ್ರಲ್ಲಿತ್ತು. ಆದ್ರೆ ಜನರ ಮಾತಿಗೆ ಕಿವಿಗೊಡದಿರಲು ನಿರ್ಧರಿಸಿದ ಗ್ಯಾಬಿ ಕೊನೆಗೂ ವಿಷ್ಯ ಬಹಿರಂಗಪಡಿಸಿದ್ದಾರೆ.

10ನೇ ವಯಸ್ಸಿನಲ್ಲಿ ತಾಯಿ ಬಟ್ಟೆ ಕದ್ದು ಧರಿಸುತ್ತಿದ್ದ ಗ್ಯಾಬಿಗೆ ಪತ್ನಿ ಬೆಂಬಲ ಸಿಕ್ಕಿದೆಯಂತೆ. 2002ರಲ್ಲಿ ಮದುವೆಯಾದ ಗ್ಯಾಬಿಗೆ ಒಂದು ಹೆಣ್ಣು ಮಗುವಿದೆ. ಆದ್ರೆ ಪತ್ನಿ ಜೊತೆ ಲೈಂಗಿಕ ಜೀವನದಲ್ಲಿ ಸಕ್ರಿಯವಾಗಿಲ್ಲವೆಂದು ಗ್ಯಾಬಿ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...