alex Certify ಪಾರ್ಟಿ ವೇಳೆಯೇ ಫೈರಿಂಗ್: ತಲೆಗೆ ಗುಂಡು ಹಾರಿಸಿ ವಿಶ್ವ ಚಾಂಪಿಯನ್ ಕುಸ್ತಿಪಟು ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿ ವೇಳೆಯೇ ಫೈರಿಂಗ್: ತಲೆಗೆ ಗುಂಡು ಹಾರಿಸಿ ವಿಶ್ವ ಚಾಂಪಿಯನ್ ಕುಸ್ತಿಪಟು ಕೊಲೆ

ಸಾವೊಪೊಲೋ: ಪಾರ್ಟಿ ವೇಳೆಯಲ್ಲಿ ಮಿಲಿಟರಿ ಪೋಲೀಸ್ ಅಧಿಕಾರಿ ಹಾರಿಸಿದ ಗುಂಡು ತಗುಲಿ ವಿಶ್ವ ಚಾಂಪಿಯನ್ ಕುಸ್ತಿಪಟು ಕೊಲ್ಲಲ್ಪಟ್ಟಿದ್ದಾರೆ.

ಜಿಯು ಜಿಟ್ಸು ದಂತಕಥೆ ಬ್ರೆಜಿಲಿಯನ್ ನ ಲಿಯಾಂಡ್ರೊ ಲೊ ಅವರನ್ನು ಸಾವೊಪೊಲೊದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಪಾರ್ಟಿ ವೇಳೆ ಸೇನಾ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ ಆರೋಪ ಕೇಳಿ ಬಂದಿದೆ.

ಪ್ರಸಿದ್ಧ ಜಿಯು ಜಿಟ್ಸು ವಿಶ್ವ ಚಾಂಪಿಯನ್ ಲಿಯಾಂಡ್ರೊ ಲೊ ಅವರಿಗೆ ಕೇವಲ 33 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ ಅವರನ್ನು ಕ್ಲಬ್‌ ನಲ್ಲಿಯೇ ಶೂಟಿಂಗ್ ಮಾಡಿ ಕೊಲ್ಲಲಾಗಿದೆ. ಪಾರ್ಟಿಯ ವೇಳೆ ಗುಂಡಿನ ದಾಳಿ ನಡೆದಿದೆ. ಮಿಲಿಟರಿ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದ ವೇಳೆ ಘಟನೆ ನಡೆದಿದೆ.

ಆರೋಪಿ ಅಧಿಕಾರಿ ಲಿಯಾಂಡ್ರೊ ಅವರ ಟೇಬಲ್‌ ನಿಂದ ಬಾಟಲಿಯನ್ನು ಎತ್ತಿಕೊಂಡಿದ್ದು, ನಂತರ ಲಿಯಾಂಡ್ರೊ ಅದನ್ನು ನೆಲದ ಮೇಲೆ ಬೀಳಿಸಿದ್ದರು. ಇದರ ನಂತರ ಆರೋಪಿ ಅಧಿಕಾರಿ ತನ್ನ ಬಂದೂಕು ತೆಗೆದು ಲಿಯಾಂಡ್ರೊನ ತಲೆಗೆ ಗುಂಡು ಹಾರಿಸಿದ್ದಾನೆ. ಕೂಡಲೇ ಲಿಯಾಂಡ್ರೊ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಜಿಯು-ಜಿಟ್ಸು ಶ್ರೇಷ್ಠ ಆಟಗಾರರಲ್ಲಿ ಲಿಯಾಂಡ್ರೊ ಒಬ್ಬರು. ಅವರು 8 ವಿಶ್ವ ಚಾಂಪಿಯನ್‌ ಶಿಪ್‌ ಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...