alex Certify ಎಬಿಡಿ ವಿಲಿಯರ್ಸ್​ ಜ್ಞಾಪಿಸಿದ ವಿರಾಟ್​ ಕೊಹ್ಲಿ ಸಿಕ್ಸರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಬಿಡಿ ವಿಲಿಯರ್ಸ್​ ಜ್ಞಾಪಿಸಿದ ವಿರಾಟ್​ ಕೊಹ್ಲಿ ಸಿಕ್ಸರ್​..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಅಂದರೆ ಸಾಕು ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸುತ್ತೆ. ಅದರಲ್ಲೂ ಕೊಹ್ಲಿ ಬಾರಿಸೋ ಸಿಕ್ಸ್ ಹಾಗೂ ಬೌಂಡರಿಗಳೆಂದರೆ ಅಭಿಮಾನಿಗಳ ಪಾಲಿಗೆ ಹಬ್ಬದೂಟವೇ ಸರಿ.

ರವಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯದಲ್ಲಿ ಕೊಹ್ಲಿ ಅದ್ಭುತ ಸಿಕ್ಸ್ ಬಾರಿಸಿದ್ದು ಅಭಿಮಾನಿಗಳು ಎಬಿಡಿ ವಿಲಿಯರ್ಸ್​ನ್ನ ಜ್ಞಾಪಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ನೀಡಿದ 195 ರನ್​ಗಳ ಗುರಿ ಬೆನ್ನತ್ತಿದ ಶಿಖರ್​ ಧವನ್​, ವಿರಾಟ್​ ಕೊಹ್ಲಿ ಹಾಗೂ ಹಾರ್ದಿಕ್​ ಪಾಂಡ್ಯ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಆರಂಭಿಕ ಬ್ಯಾಟ್ಸ್​​ಮನ್​ಗಳಾಗಿ ಮೈದಾನಕ್ಕಿಳಿದ ಕೆ.ಎಲ್. ರಾಹುಲ್​ ಹಾಗೂ ಶಿಖರ್​ ಧವನ್​​ 5 ಓವರ್​ ಆಗುವಷ್ಟರಲ್ಲಿ ತಂಡದ ಮೊತ್ತವನ್ನ 50ರ ಗಡಿ ದಾಟಿಸಿದ್ರು. ಆದರೆ ತಂಡಕ್ಕೆ 30 ರನ್​ ಸೇರಿಸಿಕೊಟ್ಟಿಟ್ಟ ರಾಹುಲ್​ 22ನೇ ಎಸೆತದಲ್ಲಿ ​ ಪೆವಿಲಿಯನ್​ ಹಾದಿ ಹಿಡಿದ್ರು.

ಬಳಿಕ ಧವನ್​ ಜೊತೆಯಾದ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಭರ್ಜರಿ ರನ್​ ಸೇರಿಸುವ ಮೂಲಕ ಅರ್ಧ ಶತಕ ಬಾರಿಸಿದ್ರು. ಆಂಡ್ರ್ಯೂ ಟೈಸ್​ ಬೌಲಿಂಗ್​ ವೇಳೆ ಕೊಹ್ಲಿ ಬಾರಿಸಿದ ಸಿಕ್ಸರ್​ ಹೊಡೆತ ಅಭಿಮಾನಿಗಳಿಗೆ ಎಬಿಡಿ ವಿಲಿಯರ್ಸ್​ರನ್ನ ಜ್ಞಾಪಿಸಿಕೊಳ್ಳುವಂತೆ ಮಾಡಿದೆ.

ಕೊಹ್ಲಿ ಸಿಕ್ಸರ್​ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನಾನಿಂದು ವಿಲಿಯರ್ಸ್​ಗೆ ಮೆಸೇಜ್​ ಮಾಡಿ ಶಾಟ್​ ಹೇಗಿತ್ತು ಎಂದು ಕೇಳ್ತೇನೆ ಅಂತಾ ಕೊಹ್ಲಿ ಹೇಳುತ್ತಿರುವಂತೆ ಕ್ಯಾಪ್ಶನ್​ ನೀಡಲಾಗಿದೆ. ಈ ಟ್ವೀಟ್​ಗೆ ವಿಲಿಯರ್ಸ್​ ಎಮೋಜಿಗಳ ಮೂಲಕ ಉತ್ತರ ನೀಡಿದ್ದಾರೆ.

— Wisden India (@WisdenIndia) December 6, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...