alex Certify ಐಪಿಎಲ್​​ ರ್ಯಾಕಿಂಗ್​ ಪಟ್ಟಿಯಲ್ಲಿ ಆರ್​ಸಿಬಿ ಕಮಾಲ್​: ಮೀಮ್ಸ್​ ಸುರಿಮಳೆ ಹರಿಸಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​​ ರ್ಯಾಕಿಂಗ್​ ಪಟ್ಟಿಯಲ್ಲಿ ಆರ್​ಸಿಬಿ ಕಮಾಲ್​: ಮೀಮ್ಸ್​ ಸುರಿಮಳೆ ಹರಿಸಿದ ಅಭಿಮಾನಿಗಳು

ಐಪಿಎಲ್​​ ರ್ಯಾಂಕಿಂಗ್​ ಪಟ್ಟಿಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಸಮಯ ಇನ್ನೂ ಬಂದಿಲ್ಲ. ಆದರೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ರ್ಯಾಂಕಿಂಗ್​ ಪಟ್ಟಿಯಲ್ಲಿ ವಿರಾಟ್​ ಪಡೆಯ ಮುನ್ನಡೆಯನ್ನ ಕಂಡು ಫುಲ್​ ಖುಶ್​ ಆಗಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ, ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆರ್​ಸಿಬಿ ಐಪಿಎಲ್​ನಲ್ಲಿ ಸತತ ಎರಡನೇ ಗೆಲುವನ್ನ ತನ್ನದಾಗಿಸಿಕೊಂಡಿದೆ.

ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಟಾಸ್​ ಸೋತು ಬ್ಯಾಟಿಂಗ್​ ಮಾಡುವ ಮೂಲಕ ಸನ್​ರೈಸರ್ಸ್​ ತಂಡಕ್ಕೆ 150 ರನ್​ಗಳ ಗುರಿಯನ್ನ ನೀಡಿತು.

ಈ ಗುರಿಯನ್ನ ಬೆನ್ನಟ್ಟಿದ ಸನ್​ರೈಸರ್ಸ್ ತಂಡ ಆರ್​ಸಿಬಿ ಬೌಲಿಂಗ್​ ಕರಾಮತ್ತಿಗೆ ಸಿಲುಕಿ ಸೋಲನ್ನ ಕಂಡಿದೆ. ಈ ಮೂಲಕ ಆರ್​ಸಿಬಿ ಆರು ರನ್​ಗಳ ರೋಚಕ ಜಯ ಸಾಧಿಸಿತು.

ಸತತ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಇದೀಗ ಪಾಯಿಂಟ್​ ಟೇಬಲ್​ನಲ್ಲಿ ಟಾಪ್​ನಲ್ಲಿದೆ. ಇದರಿಂದ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಶ್​ ಆಗಿದ್ದು ಮೀಮ್ಸ್​​ ಸರಮಾಲೆಯನ್ನೇ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...