alex Certify ಮಗುವಾದ್ಮೇಲೆ ಮೊದಲ ಬಾರಿ ಕಾಣಿಸಿಕೊಂಡ ವಿರುಷ್ಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಾದ್ಮೇಲೆ ಮೊದಲ ಬಾರಿ ಕಾಣಿಸಿಕೊಂಡ ವಿರುಷ್ಕಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಪಾಲಕರಾಗಿದ್ದಾರೆ. ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 11ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆಂದು ಕೊಹ್ಲಿ ಮಾಹಿತಿ ನೀಡಿದ್ದರು. ಈಗ ವಿರಾಟ್-ಅನುಷ್ಕಾ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಮಗುವಿಗೆ ಜನ್ಮ ನೀಡಿದ ನಂತ್ರ ಆಸ್ಪತ್ರೆಗೆ ಬಂದಿದ್ದ ಅನುಷ್ಕಾ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ವಿರಾಟ್ ಕೊಹ್ಲಿ ಕಪ್ಪು ಬಣ್ಣದ  ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ಅನುಷ್ಕಾ ನೀಲಿ ಬಣ್ಣದ ಡೆನಿಮ್ ಜೀನ್ಸ್ ಹಾಗೂ ಶರ್ಟ್ ಧರಿಸಿದ್ದರು. ಅಮ್ಮನಾದ್ಮೇಲೆ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅನುಷ್ಕಾ ವಿಡಿಯೋ ವೈರಲ್ ಆಗಿದೆ.

2020ರ ಆಗಸ್ಟ್ ನಲ್ಲಿ ವಿರುಷ್ಕಾ ಪಾಲಕರಾಗುವ ಸಂಗತಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಅನುಷ್ಕಾ ಬೇಬಿ ಬಂಪ್ ಜೊತೆ ಅನೇಕ ಫೋಟೋ ಹಂಚಿಕೊಂಡಿದ್ದರು. ಮಗುವಾದ್ಮೇಲೆ ಅನುಷ್ಕಾ ಕಾಣಿಸಿಕೊಂಡಿರಲಿಲ್ಲ. ವಿರುಷ್ಕಾ ಮಗುವಿನ ಫೋಟೋವನ್ನು ಅಭಿಮಾನಿಗಳು ನೋಡಿಲ್ಲ. ಮಗು ಜನಿಸಿದ ವಿಷ್ಯವನ್ನು ಅಭಿಮಾನಿಗಳ ಮುಂದಿಟ್ಟಿದ್ದ ಕೊಹ್ಲಿ, ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...