alex Certify ಕೊರೊನಾ ನಾಶ ಮಾಡುವ ವಿಡಿಯೋ ಗೇಮ್​ ಕಂಡು ಹಿಡಿದ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಾಶ ಮಾಡುವ ವಿಡಿಯೋ ಗೇಮ್​ ಕಂಡು ಹಿಡಿದ ಬಾಲಕ..!

US Teen Creates Video Game 'Covid Invaders' Where You Can Destroy the Virus  with One Clickಕೆಟ್ಟ ವರ್ಷವಾದ 2020ಕ್ಕೆ ವಿದಾಯ ಹೇಳಿ 2021ಕ್ಕೆ ಸ್ವಾಗತ ಕೋರಿದ ನಂತರ ಕೋವಿಡ್​ ಮುಕ್ತ ಜಗತ್ತಿಗಾಗಿ ಪ್ರತಿಯೊಬ್ಬರೂ ಎದುರು ನೋಡುತ್ತಿದ್ದಾರೆ.

ಕೊರೊನಾ ವೈರಸ್​ನ್ನ ಸಂಪೂರ್ಣವಾಗಿ ನಾಶ ಮಾಡಬೇಕು ಎಂಬುದು ಪ್ರತಿಯೊಬ್ಬನ ಕನಸಾಗಿದೆ. ಈ ಕನಸನ್ನ ಅಮೆರಿಕದ ಮಿನ್ನೆಸೋಟದ ಬಾಲಕನೊಬ್ಬ ಸಾಕಾರಗೊಳಿಸಿದ್ದಾನೆ.

ಈತ ಕಂಡು ಹಿಡಿದಿರುವ ಕೋವಿಡ್​ ಇನ್ವೆಡರ್ಸ್​ ಎಂಬ ಮೊಬೈಲ್​ ಗೇಮ್​ ಮೂಲಕ ಒಂದೇ ಕ್ಲಿಕ್​ನಲ್ಲಿ ನೀವು ಕೊರೊನಾ ವೈರಸ್​ ನಾಶ ಮಾಡಬಹುದಾಗಿದೆ.

ಜೋಶ್​ ಟೆನ್ರ್ಯಾಕ್​ ಎಂಬ ಬಾಲಕ ಈ ವಿಡಿಯೋ ಗೇಮ್​ ಕಂಡು ಹಿಡಿದಿದ್ದಾನೆ. ಇದರಲ್ಲಿ ಬಳಕೆದಾರರು ಲಸಿಕೆ ಮೂಲಕ ಕೊರೊನಾ ವೈರಸ್​ ಮೇಲೆ ದಾಳಿ ಮಾಡಬಹುದಾಗಿದೆ. ಸಾಂಕ್ರಾಮಿಕ ಆತಂಕದಲ್ಲಿರುವ ಜನತೆ ಈ ವಿಡಿಯೋ ಗೇಮ್ ಮೂಲಕ ಮನಸ್ಸನ್ನ ನಿರಾಳ ಮಾಡಿಕೊಳ್ಳಬಹುದು ಅಂತಾ ಜೋಶ್​ ಹೇಳಿದ್ದಾನೆ.

70 ದಶಕದಲ್ಲಿ ಜನಪ್ರಿಯವಾಗಿದ್ದ ವಿಡಿಯೋ ಗೇಮ್​ ಸ್ಪೇಸ್​ ಇನ್ವೇಡರ್ಸ್​ನಿಂದ ಸ್ಪೂರ್ತಿ ಪಡೆದು ಜೋಶ್​ ಈ ಗೇಮ್​ ರಚಿಸಿದ್ದಾರೆ. 16 ವರ್ಷದ ಜೋಶ್​ 11ನೇ ವಯಸ್ಸಿನಲ್ಲೇ ಕೋಡಿಂಗ್​ ಕಲಿತಿದ್ದಾನೆ. ಹೀಗಾಗಿ ಈತನಿಗೆ ವಿಡಿಯೋ ಗೇಮ್ ರೂಪಿಸೋದು ಸುಲಭವಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...