alex Certify ನೆಟ್ಟಿಗರ ಹೃದಯ ಗೆದ್ದಿದೆ ಈತನ ಕ್ರೀಡಾ ಸ್ಪೂರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದಿದೆ ಈತನ ಕ್ರೀಡಾ ಸ್ಪೂರ್ತಿ

ಕ್ರೀಡಾ ಸ್ಫೂರ್ತಿ ಮೆರೆಯುವ ಅನೇಕ ಆಟಗಾರರು ಆಟಕ್ಕಿಂತ ಹೆಚ್ಚಾಗಿ ಹೃದಯಗಳನ್ನು ಗೆಲ್ಲುವ ಮೂಲಕ ನಮ್ಮ ಮನದಲ್ಲಿ ಉಳಿದುಕೊಳ್ಳುತ್ತಾರೆ. ಟೆನಿಸ್ ಅಂಗಳಲ್ಲಿ ಪರಸ್ಪರ ಕೈ ಕುಲುಕಿಕೊಳ್ಳುವ ಎದುರಾಳಿ ಆಟಗಾರರು, ಓಟದ ನಡುವೆ ಬಿದ್ದ ಸಹ ಅಥ್ಲೀಟ್‌ಗೆ ಎದ್ದೇಳಲು ನೆರವಾಗುವ ಓಟಗಾರ, ವೇಗದ ಎಸೆತ ಕಾರಣ ನೆಲಕ್ಕೆ ಬೀಳುವ ಬ್ಯಾಟ್ಸ್‌ಮನ್ ‌ಅನ್ನು ಮೇಲೇಳಲು ಸಹಾಯ ಮಾಡುವ ಬೌಲರ್‌……ಹೀಗೆ ಸಾಕಷ್ಟು ನಿದರ್ಶನಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿಬಿಡುತ್ತವೆ.

ಸ್ಪೇನ್‌ನ ಟ್ರಯಾಥ್ಲೀಟ್ ಒಬ್ಬರು ಫಿನಿಶ್ ಲೈನ್‌ ಬಳಿ ನಿಂತುಕೊಂಡು, ತಪ್ಪು ದಿಕ್ಕಿನಲ್ಲಿ ಓಡುತ್ತಿದ್ದ ತಮ್ಮ ಬ್ರಿಟಿಷ್ ಎದುರಾಳಿಗೆ ಸರಿಯಾದ ಹಾದಿ ತೋರುವ ಮೂಲಕ ಆತ ಕಂಚಿನ ಪದಕ ಗೆಲ್ಲುವಂತೆ ಮಾಡಿದ್ದಾರೆ. ತಪ್ಪು ತಿರುವನ್ನು ಪಡೆದ ಟೀಗಲ್‌, ಇದೇ ಹತಾಶೆಯಲ್ಲಿ ತಮ್ಮ ಕೈಗಳನ್ನು ತಲೆ ಮೇಲೆ ಇಟ್ಟುಕೊಂಡಿದ್ದರು. ಇದೇ ವೇಳೆ ಲೀಡ್ ಪಡೆದುಕೊಂಡ ಸ್ಪೇನ್‌ನ ಮೆಟ್ರಡಾ, ಬ್ರಿಟಿಷ್‌ ಅಥ್ಲೀಟ್ ಮಾಡಿದ ತಪ್ಪನ್ನು ಕಂಡು, ಆತ ಗೆರೆಯನ್ನು ಮೊದಲು ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಇದಾದ ಬಳಿಕ ಟೀಗಲ್ ‌ರನ್ನು ಗ್ರೀಟ್ ಮಾಡಿದ್ದಾರೆ. ಇಬ್ಬರ ನಡುವಿನ ಈ ಸ್ಪೋರ್ಟ್ಸ್‌ಮನ್‌ಶಿಪ್‌ ಸ್ಪೂರ್ತಿಯ ನೆಟ್ಟಿಗರು ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...