alex Certify ಸೂರ್ಯ ಕುಮಾರ್ ಭರ್ಜರಿ ಶತಕ, ಕುಲದೀಪ್ ಗೆ 5 ವಿಕೆಟ್: 3ನೇ ಟಿ20ಯಲ್ಲಿ ಭಾರತಕ್ಕೆ 106 ರನ್ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯ ಕುಮಾರ್ ಭರ್ಜರಿ ಶತಕ, ಕುಲದೀಪ್ ಗೆ 5 ವಿಕೆಟ್: 3ನೇ ಟಿ20ಯಲ್ಲಿ ಭಾರತಕ್ಕೆ 106 ರನ್ ಜಯ

ಜೋಹಾನ್ಸ್ ಬರ್ಗ್: ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ, ಕುಲದೀಪ್ ಯಾದವ್ ಸ್ಪಿನ್ ದಾಳಿ ನೆರವಿನಿಂದ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್ ಗಳಿಂದ ಜಯಗಳಿಸಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್ ಗಳಿಂದ ಜಯಗಳಿಸಿತ್ತು.

ಜೋಹಾನ್ಸ್ ಬರ್ಗ್ ನ ದಿ ವಾಂಡರರ್ಸ್ಸ್ಟೇಡಿಯಂನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಸೂರ್ಯ ಕುಮಾರ್ 100, ಯಶಸ್ವಿ ಜೈಸ್ವಾಲ್ 60 ರನ್ ಗಳಿಸಿದರು. ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಗೆ 201 ರನ್ ಗಳಿಸಿತು.

ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ 13.5 ಓವರ್ ಗಳಲ್ಲಿ 95 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಕುಲದೀಪ್ ಯಾದವ್ 17 ರನ್ ಗೆ 5 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್, ಮುಕೇಶ್ ಕುಮಾರ್, ಅರ್ಶ್ ದೀಪ್ ತಲಾ ಒಂದು ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...