alex Certify ಕಣ್ಣೀರಿಡುತ್ತಾ ವಿಂಬಲ್ಡನ್​ ಟೂರ್ನಿಯಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣೀರಿಡುತ್ತಾ ವಿಂಬಲ್ಡನ್​ ಟೂರ್ನಿಯಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್​

ಮೊದಲ ಸುತ್ತಿನ ಪಂದ್ಯದಲ್ಲಿ ಆಟವಾಡುತ್ತಿದ್ದಾಗ ಗಾಯಗೊಂಡ ಸೆರೆನಾ ವಿಲಿಯಮ್ಸ್​ ವಿಂಬಲ್ಡನ್​ 2021ರಿಂದ ಹೊರನಡೆದಿದ್ದಾರೆ. ಈ ಮೂಲಕ ಅಲಿಯಾಕ್ಸಂದ್ರ ಸಾಸ್ನೋವಿಚ್​ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಈ ಮೂಲಕ 8ನೇ ವಿಂಬಲ್ಡನ್​ ಸಿಂಗಲ್ಸ್ ಪ್ರಶಸ್ತಿ ಹಾಗೂ 24ನೇ ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿಯನ್ನ ಬಾಚಿಕೊಳ್ಳುವ ಅಮೆರಿಕದ ಸ್ಟಾರ್​​ ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​ ಕನಸು ಕನಸಾಗಿಯೇ ಉಳಿದಂತಾಗಿದೆ. ಆಟವಾಡುತ್ತಿದ್ದ ವೇಳೆ ಕೋರ್ಟ್​ನಲ್ಲಿ ಜಾರಿಬಿದ್ದ ಸೆರೆನಾ ಗಾಯಕ್ಕೀಡಾದರು ಹಾಗೂ ಅವರು ಕಣ್ಣೀರಿಡುತ್ತಾ ಕೋರ್ಟ್​ನಿಂದ ಹೊರನಡೆದಿದ್ದಾರೆ.

39 ವರ್ಷದ ಸೆರೆನಾ ಐದನೇ ಗೇಮ್​ನಲ್ಲಿ ಇದ್ದ ವೇಳೆ ಹುಲ್ಲು ಹಾಸಿನ ಮೇಲೆ ಜಾರಿ ಬಿದ್ದಿದ್ದಾರೆ. ನೋವಿನಲ್ಲೇ ಇದ್ದ ಸೆರೆನಾ ನಡೆದಾಡಲು ಯತ್ನಿಸಿದ್ದಾರೆ. ಆದರೆ ಇನ್ನು ಆಡಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆಯೇ ಸೆರೆನಾ ಕಣ್ಣೀರಿಡುತ್ತಾ ಲಾಕರ್​ ರೂಮ್​ಗೆ ತೆರಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...