alex Certify ತಾಯ್ತನ ಮತ್ತು ವೃತ್ತಿ ಜೀವನದ ಕುರಿತು ಸಾನಿಯಾ ಸುದೀರ್ಘ ಪತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯ್ತನ ಮತ್ತು ವೃತ್ತಿ ಜೀವನದ ಕುರಿತು ಸಾನಿಯಾ ಸುದೀರ್ಘ ಪತ್ರ

ಟೆನ್ನಿಸ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ತಾಯ್ತನದ ಸವಾಲುಗಳನ್ನೂ ಎದುರಿಸುತ್ತಿದ್ದಾರೆ.

ಸಾನಿಯಾ ಮಿರ್ಜಾ ಅವರ ಓಡ್​ ಟು ಆಲ್​ ಮದರ್ಸ್​ನಲ್ಲಿ ವಿಶ್ವದ ಎಲ್ಲ ತಾಯಂದಿರಿಗೆ ಪತ್ರ ಬರೆದಿರುವ ಸಾನಿಯಾ, ತಾಯಿ ಹಾಗೂ ಟೆನ್ನಿಸ್​ ಆಟಗಾರ್ತಿ ಎಂದು ಬರೆದು ಸಹಿ ಹಾಕಿದ್ದಾರೆ.

34 ವರ್ಷದ ಸಾನಿಯಾ ಮಿರ್ಜಾ 2018ರಲ್ಲಿ ಇಝಾನ್​ ಮಿರ್ಜಾ ಮಲಿಕ್​ಗೆ ಜನ್ಮ ನೀಡಿದ್ದರು. 2 ವರ್ಷಗಳ ಬಳಿಕ ಟೆನ್ನಿಸ್​ ಲೋಕಕ್ಕೆ ವಾಪಸ್ಸಾದ ಮಿರ್ಜಾ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.

ತಾಯ್ತನ ಹಾಗೂ ಕನಸು ಇವೆರಡರದಲ್ಲಿ ಒಂದನ್ನ ಮಹಿಳೆ ಆರಿಸಿಕೊಳ್ಳಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ನಾನು ಈ ಪತ್ರದಲ್ಲಿ ನನ್ನ ಜೀವನದ ಪ್ರಯಾಣವನ್ನ ಹಂಚಿಕೊಳ್ಳುತ್ತಿದ್ದೇನೆ. ಸೆರೆನಾ ವಿಲಿಯಮ್ಸ್​ರ ಜೀವನ ಪ್ರಯಾಣದಿಂದ ಸ್ಪೂರ್ತಿ ಪಡೆದ ನಾನು ಅವರ ಬಗ್ಗೆಯೂ ಕೊಂಚ ಬರೆಯಲಿದ್ದೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...