ಮೊದಲ ಸುತ್ತಿನ ಪಂದ್ಯದಲ್ಲಿ ಆಟವಾಡುತ್ತಿದ್ದಾಗ ಗಾಯಗೊಂಡ ಸೆರೆನಾ ವಿಲಿಯಮ್ಸ್ ವಿಂಬಲ್ಡನ್ 2021ರಿಂದ ಹೊರನಡೆದಿದ್ದಾರೆ. ಈ ಮೂಲಕ ಅಲಿಯಾಕ್ಸಂದ್ರ ಸಾಸ್ನೋವಿಚ್ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಈ ಮೂಲಕ 8ನೇ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಹಾಗೂ 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನ ಬಾಚಿಕೊಳ್ಳುವ ಅಮೆರಿಕದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕನಸು ಕನಸಾಗಿಯೇ ಉಳಿದಂತಾಗಿದೆ. ಆಟವಾಡುತ್ತಿದ್ದ ವೇಳೆ ಕೋರ್ಟ್ನಲ್ಲಿ ಜಾರಿಬಿದ್ದ ಸೆರೆನಾ ಗಾಯಕ್ಕೀಡಾದರು ಹಾಗೂ ಅವರು ಕಣ್ಣೀರಿಡುತ್ತಾ ಕೋರ್ಟ್ನಿಂದ ಹೊರನಡೆದಿದ್ದಾರೆ.
39 ವರ್ಷದ ಸೆರೆನಾ ಐದನೇ ಗೇಮ್ನಲ್ಲಿ ಇದ್ದ ವೇಳೆ ಹುಲ್ಲು ಹಾಸಿನ ಮೇಲೆ ಜಾರಿ ಬಿದ್ದಿದ್ದಾರೆ. ನೋವಿನಲ್ಲೇ ಇದ್ದ ಸೆರೆನಾ ನಡೆದಾಡಲು ಯತ್ನಿಸಿದ್ದಾರೆ. ಆದರೆ ಇನ್ನು ಆಡಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆಯೇ ಸೆರೆನಾ ಕಣ್ಣೀರಿಡುತ್ತಾ ಲಾಕರ್ ರೂಮ್ಗೆ ತೆರಳಿದ್ರು.