alex Certify ಸಚಿನ್​ ತೆಂಡೂಲ್ಕರ್​​ಗೆ ಕೊರೊನಾ ಪಾಸಿಟಿವ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್​ ತೆಂಡೂಲ್ಕರ್​​ಗೆ ಕೊರೊನಾ ಪಾಸಿಟಿವ್​….!

ಟೀಂ ಇಂಡಿಯಾ ಮಾಜಿ ಆಟಗಾರ ಕ್ರಿಕೆಟ್​​ ದೇವರು ಸಚಿನ್​ ತೆಂಡೂಲ್ಕರ್​ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 47 ವರ್ಷದ ಮಾಜಿ ಕ್ರಿಕೆಟಿಗ ಶನಿವಾರ ಟ್ವಿಟರ್​​ನಲ್ಲಿ ಈ ವಿಚಾರವನ್ನ ದೃಢಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ದೂರ ಇರಬೇಕು ಎಂದು ಸಾಕಷ್ಟು ಮುಂಜಾಗ್ರತೆ ವಹಿಸಿದ ಬಳಿಕವೂ ನಾನು ವೈರಸ್​ ದಾಳಿಗೆ ತುತ್ತಾಗಿದ್ದಾನೆ. ನನಗೆ ಕೊರೊನಾ ಪಾಸಿಟಿವ್​ ಬಂದಿದ್ದು ಕೆಲ ಸೌಮ್ಯ ಲಕ್ಷಣಗಳನ್ನ ಹೊಂದಿದ್ದೇನೆ. ಮನೆಯ ಇತರೆ ಸದಸ್ಯರು ಕೊರೊನಾ ನೆಗೆಟಿವ್​ ವರದಿ ಹೊಂದಿದ್ದಾರೆ.

ನಾನು ಮನೆಯಲ್ಲೇ ಕ್ವಾರಂಟೈನ್​ ಆಗಿದ್ದು ವೈದ್ಯರು ಹೇಳಿದ ಎಲ್ಲಾ ಸೂಚನೆಗಳನ್ನ ಪಾಲಿಸುತ್ತಿದ್ದೇನೆ. ದೇಶದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಲೋಕಕ್ಕೆ ನನ್ನ ಧನ್ಯವಾದ ಅರ್ಪಿಸುವೆ. ಎಲ್ಲರೂ ಕಾಳಜಿಯಿಂದಿರಿ ಎಂದು ಸಚಿನ್​ ಟ್ವೀಟಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...