alex Certify ರೋಹಿತ್ ಶರ್ಮಾ ಯಶಸ್ಸಿನ ಬೆನ್ನಲ್ಲೇ ಈ ಬೇಡಿಕೆ ಮುಂದಿಟ್ಟ ಅಭಿಮಾನಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್ ಶರ್ಮಾ ಯಶಸ್ಸಿನ ಬೆನ್ನಲ್ಲೇ ಈ ಬೇಡಿಕೆ ಮುಂದಿಟ್ಟ ಅಭಿಮಾನಿಗಳು…!

Image result for rohit-sharma-wife-ritika-sajdeh-becomes-his-lucky-charm-as-he-smashes-his-7-test-century

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಹಿಟ್ ಮೆನ್ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಅದ್ಬುತ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾಗಿದ್ದಾರೆ. ಟೆಸ್ಟ್ ಪಂದ್ಯದಲ್ಲೂ ಹಿಟ್ ಮೆನ್ ಅವತಾರ ತೋರಿದ ರೋಹಿತ್ ಶರ್ಮಾ 14 ಬೌಂಡರಿ, 2 ಸಿಕ್ಸ್ ಬಾರಿಸಿದ್ರು.

ತಂಡಕ್ಕೆ ಆಸರೆಯಾದ ರೋಹಿತ್ ಶರ್ಮಾ, 130 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇಷ್ಟೇ ಅಲ್ಲ 208 ಎಸೆತಕ್ಕೆ ಶರ್ಮಾ 150 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾಗೆ ಅವ್ರ ಪತ್ನಿ ರಿತಿಕಾ ಲಕ್ಕಿ ಚಾರ್ಮ್ ಎನ್ನಲಾಗ್ತಿದೆ.

ಕ್ರೀಡಾಂಗಣದಲ್ಲಿದ್ದ ರಿತಿಕಾ, ಶರ್ಮಾ ಬೌಂಡರಿ, ಸಿಕ್ಸ್ ಬಾರಿಸುತ್ತಿದ್ದಂತೆ ಮುದ್ದಾಗಿ ಪ್ರತಿಕ್ರಿಯೆ ನೀಡ್ತಿದ್ದರು. ರೋಹಿತ್ ಶತಕಕ್ಕೆ ಹತ್ತಿರವಾಗ್ತಿದ್ದಂತೆ ರಿತಿಕಾ ಟೆನ್ಷನ್ ನಲ್ಲಿದ್ದರು. ಇದು ಅವ್ರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಶರ್ಮಾ ಶತಕ ಬಾರಿಸುತ್ತಿದ್ದಂತೆ ರಿತಿಕಾ ಮುಖದಲ್ಲಿ ನಗು ಮೂಡಿತ್ತು.

ರಿತಿಕಾ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಕಮೆಂಟ್ ಬರ್ತಿದೆ. ರಿತಿಕಾರನ್ನು ಟೀಂ ಇಂಡಿಯಾದ ಲಕ್ಕಿ ಚಾರ್ಮ್ ಎಂದು ಘೋಷಣೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರೋಹಿತ್ ಟೆಸ್ಟ್ ವೃತ್ತಿ ಜೀವನದಲ್ಲಿ 7 ಶತಕ ಸಿಡಿಸಿದ್ದಾರೆ. 2019ರಲ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ದ ಶರ್ಮಾ, 15 ತಿಂಗಳ ನಂತ್ರ ಶತಕ ಸಿಡಿಸಿದ್ದಾರೆ. ಚೆನ್ನೈನಲ್ಲಿ ಇದು ಅವ್ರ ಮೊದಲ ಶತಕ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...