alex Certify ಈ ಕಾರಣಕ್ಕೆ ವೈರಲ್​ ಆಯ್ತು ರಿಷಬ್​ ಪಂತ್ ಧರಿಸಿದ ಟೀ ಶರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವೈರಲ್​ ಆಯ್ತು ರಿಷಬ್​ ಪಂತ್ ಧರಿಸಿದ ಟೀ ಶರ್ಟ್​

ಟೀಂ ಇಂಡಿಯಾ ಆಟಗಾರ ರಿಷಬ್​ ಪಂತ್ ಲಿವರ್​ಪೂಲ್​​ ಫುಟಬಾಲ್​ ಕ್ಲಬ್​ನ ಅಭಿಮಾನಿಯಾಗಿದ್ದಾರೆಯೇ..? ಇಂತಹದ್ದೊಂದು ಪ್ರಶ್ನೆ ರಿಷಬ್​ ಪಂತ್​ರ ಟ್ವಿಟರ್​ ಪೋಸ್ಟ್​ ಒಂದನ್ನ ನೋಡಿದ ಬಳಿಕ ಹುಟ್ಟಿಕೊಂಡಿದೆ.

ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯದ ನಗೆ ಬೀರಿದ ಬಳಿಕ ಭಾರತೀಯ ಆಟಗಾರರು ಫುಲ್​ ಚಿಲ್ಲಿಂಗ್​ ಮೂಡ್​ಗೆ ಜಾರಿದ್ದಾರೆ.

ಟೀಂ ಇಂಡಿಯಾ ಆಟಗಾರರು ಗೆಲುವನ್ನ ಸಂಭ್ರಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ರಿಷಬ್​ ಪಂತ್​ ಕೂಡ ಈ ಸೆಲೆಬ್ರೇಷನ್​ನ ಫೋಟೋಗಳನ್ನ ಶೇರ್​ ಮಾಡಿದ್ದು ಇದರಲ್ಲಿ ಅವರು ಕೆಂಪು ಬಣ್ಣದ ಲಿವರ್​ಪೂಲ್​ ಫುಟ್​ಬಾಲ್​ ಕ್ಲಬ್​ನ ಟೀ ಶರ್ಟ್ ಧರಿಸಿದ್ದಾರೆ.

ಈ ಫೋಟೋಗೆ ರಿಷಬ್​ ಪಂತ್​, ನಮ್ಮ ಟೀಂ ಒಟ್ಟಿಗೆ ಎಂಜಾಯ್​ ಮಾಡುತ್ತೆ ಹಾಗೂ ಒಟ್ಟಿಗೆ ಗೆಲ್ಲುತ್ತೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋದಲ್ಲಿ ಪಂತ್​ ಹಾಕಿದ ಲಿವರ್​ಪೂಲ್​ ಜೆರ್ಸಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿದೆ. ಪಂತ್​ರ ಈ ಪೋಸ್ಟ್​ಗೆ ಲಿವರ್​ಪೂಲ್​​ ಎಫ್​ಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಪಂತ್​ರ ಟೀ ಶರ್ಟ್ ಬಗ್ಗೆ ಮಾತನಾಡಿಕೊಳ್ತಿದ್ದಾರೆ.

— Rishabh SKY Stan Acc (@Swapan_Sarit) March 25, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...