alex Certify ಮೈದಾನದಲ್ಲಿ ಸ್ಪೈಡರ್‌ಮನ್‌ ಹಾಡು ಗುನುಗಿದ ಪಂತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದಾನದಲ್ಲಿ ಸ್ಪೈಡರ್‌ಮನ್‌ ಹಾಡು ಗುನುಗಿದ ಪಂತ್

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತದ ತಂಡದ ವಿಕೆಟ್‌ ಕೀಪರ್‌ ರಿಶಭ್‌ ಪಂತ್‌, ಮೈದಾನದಲ್ಲಿರುವ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಏಕಾಗ್ರತೆ ಹಾಳು ಮಾಡಲು ಸಿಕ್ಕಾಪಟ್ಟೆ ಮಾತನಾಡುವ ದೃಶ್ಯಾವಳಿಗಳು ಸ್ಟಂಪ್‌ ಕ್ಯಾಮೆರಾ & ಮೈಕ್‌ನಲ್ಲಿ ದಾಖಲಾಗಿ, ಅವೆಲ್ಲಾ ಸಖತ್‌ ವೈರಲ್ ಆಗಿವೆ.

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುವಾಗ 23 ವರ್ಷದ ಪಂತ್‌, ’ಸ್ಪೈಡರ್‌ಮನ್, ಸ್ಪೈಡರ್‌ಮನ್‌’ ಎಂದು ಹಾಡುತ್ತಿರುವುದು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ.

ಸರಣಿಯು 1-1ರಲ್ಲಿ ಸಮನಾಗಿದ್ದು, ಉಭಯ ತಂಡಗಳಲ್ಲೂ ಸಹ ಸರಣಿ ಗೆಲ್ಲಬೇಕೆಂಬ ಪೈಪೋಟಿಯುತ ಆಟ ಕಂಡುಬರುತ್ತಿದೆ. ಆಸ್ಟ್ರೇಲಿಯಾದ ಟಿಮ್ ಪೇನ್ ಹಾಗೂ ಕೆಮರಾನ್ ಗ್ರೀನ್ ಕ್ರೀಸ್‌ನಲ್ಲಿದ್ದ ವೇಳೆ ಪಂತ್‌ ಎಂಜಾತ್‌ ಮಾಡುತ್ತಿದ್ದ ದೃಶ್ಯ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...