alex Certify BIG NEWS: ಶೇನ್ ವಾರ್ನ್ ಸಾವಿನ ಕಾರಣ ಬಹಿರಂಗಪಡಿಸಿದ ಥೈಲ್ಯಾಂಡ್ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶೇನ್ ವಾರ್ನ್ ಸಾವಿನ ಕಾರಣ ಬಹಿರಂಗಪಡಿಸಿದ ಥೈಲ್ಯಾಂಡ್ ಪೊಲೀಸರು

ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಶುಕ್ರವಾರ ಥೈಲ್ಯಾಂಡ್‌ನಲ್ಲಿ ನಿಧನರಾದರು. ಶಂಕಿತ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶೇನ್ ವಾರ್ನ್ ಸತ್ತಿದ್ದು ಹೇಗೆ? ಸಾವಿಗೆ ಕಾರಣವೇನು?

ಥಾಯ್ಲೆಂಡ್‌ನಲ್ಲಿ ಸಾಯುವ ಮೊದಲು ವಾರ್ನ್ ಎದೆನೋವು ಅನುಭವಿಸಿದ್ದರು. ಆಸ್ತಮಾ ಮತ್ತು ಕೆಲವು ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದುಕೊಂಡಿರುವ ವೈದ್ಯಕೀಯ ಇತಿಹಾಸ ಹೊಂದಿದ್ದರು ಎಂದು ಥಾಯ್ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ವಾರ್ನ್ ಅವರ ಕುಟುಂಬದ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.

ಕೊಹ್ ಸಮುಯಿಯಲ್ಲಿರುವ ಬೋ ಫುಟ್ ಪೊಲೀಸ್ ಠಾಣೆಯ ಅಧೀಕ್ಷಕ ಯುಟ್ಟಾನಾ ಸಿರಿಸೊಂಬತ್ ಸುದ್ದಿಗಾರರೊಂದಿಗೆ ಮಾತನಾಡಿ, ವಾರ್ನ್ ತನ್ನ ಹೃದಯದ ತೊಂದರೆ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ.

ಶೇನ್ ವಾರ್ನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಾನುವಾರ ಥಾಯ್ ಮುಖ್ಯ ಭೂಭಾಗದಲ್ಲಿರುವ ಸೂರತ್ ಥಾನಿಗೆ ವರ್ಗಾಯಿಸಲಾಗುವುದು ಎಂದು ಅವರು ಹೇಳಿದರು. ಸಾವಿನ ಸಂಭವನೀಯ ಕಾರಣವನ್ನು ಕೇಳಿದಾಗ ಯುಟ್ಟಾನಾ ಪ್ರತಿಕ್ರಿಯಿಸಲು ನಿರಾಕರಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...