alex Certify BREAKING: ದಿಢೀರ್ ನಿವೃತ್ತಿ ಘೋಷಿಸಿ ಕ್ರೀಡಾಭಿಮಾನಿಗಳಿಗೆ PV ಸಿಂಧು ಬಿಗ್ ಶಾಕ್..! ಹಲ್ಚಲ್ ಸೃಷ್ಠಿಸಿದ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ದಿಢೀರ್ ನಿವೃತ್ತಿ ಘೋಷಿಸಿ ಕ್ರೀಡಾಭಿಮಾನಿಗಳಿಗೆ PV ಸಿಂಧು ಬಿಗ್ ಶಾಕ್..! ಹಲ್ಚಲ್ ಸೃಷ್ಠಿಸಿದ ಟ್ವೀಟ್

ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ‘ಐ ರಿಟೈರ್’ ಎಂದು ಮಾಡಿರುವ ಟ್ವೀಟ್ ಹಲ್ಚಲ್ ಸೃಷ್ಟಿಸಿದೆ.

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಪಿ.ವಿ. ಸಿಂಧು ಹೀಗೆ ನಿವೃತ್ತಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಕ್ರೀಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಟ್ವೀಟ್ ಸಂಪೂರ್ಣ ಓದಿದ ಬಳಿಕ ಅವರು ಬ್ಯಾಡ್ಮಿಟನ್ ನಿಂದ ನಿವೃತ್ತಿ ಪಡೆಯುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ.

ಡೆನ್ಮಾರ್ಕ್ ಓಪನ್ ನಿಂದ ಹಿಂದೆ ಸರಿದಿರುವ ಅವರು ಕೌಟುಂಬಿಕ ಕಾರಣಕ್ಕೆ ಲಂಡನ್ ನಲ್ಲಿ ಉಳಿದುಕೊಂಡಿದ್ದಾರೆ. ಈ ನಡುವೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗಿತ್ತು.

ಡೆನ್ಮಾರ್ಕ್ ಟೂರ್ನಿ ಕೊನೆಯ ಪಂದ್ಯವಾಗಿದೆ ಎಂದು ತಿಳಿಸಿದ ಸಿಂಧು ನಾನು ನಿವೃತ್ತಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮನೆಯಲ್ಲೇ ಉಳಿಯುವಂತಾಗಿದೆ. ಕೆಟ್ಟ ಆಲೋಚನೆಗಳಿಂದ ನಾನು ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ. ಕ್ರೀಡೆಯಿಂದ ನಿವೃತ್ತಿ ಆಗುತ್ತಿಲ್ಲ. ಬದಲಾಗಿ ಮುಂದಿನ ಟೂರ್ನಿಯನ್ನು ಸಮರ್ಥವಾಗಿ ಎದುರಿಸಲು ತಯಾರಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಅವರು ಮಾಡಿರುವ ಟ್ವೀಟ್ ಗೊಂದಲ ಉಂಟು ಮಾಡಿ ಅಭಿಮಾನಿಗಳಲ್ಲಿ ಆಘಾತ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...