alex Certify ಐಪಿಎಲ್​ ನಲ್ಲಿ ಶಾರೂಖ್​​ ಖಾನ್ ಖರೀದಿಸಿದ ಬಳಿಕ ಪ್ರೀತಿ ಝಿಂಟಾ‌ ಪ್ರತಿಕ್ರಿಯೆ ವಿಡಿಯೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ ನಲ್ಲಿ ಶಾರೂಖ್​​ ಖಾನ್ ಖರೀದಿಸಿದ ಬಳಿಕ ಪ್ರೀತಿ ಝಿಂಟಾ‌ ಪ್ರತಿಕ್ರಿಯೆ ವಿಡಿಯೋ ವೈರಲ್..!

ಐಪಿಎಲ್​ 14ನೇ ಆವೃತ್ತಿಗಾಗಿ ಚೆನ್ನೈನ ಖಾಸಗಿ ಹೋಟೆಲ್​ ಒಂದರಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಪ್ರೀತಿ ಝಿಂಟಾ ಸಹ ಮಾಲಿಕತ್ವದ ಕಿಂಗ್ಸ್ ಇಲೆವನ್​ ಪಂಜಾಬ್​ 5.25 ಕೋಟಿ ರೂಪಾಯಿಗೆ ಆಲ್​ರೌಂಡರ್​ ಶಾರೂಖ್​ ಖಾನ್​ರನ್ನ ಖರೀದಿ ಮಾಡಿದೆ.

20 ಲಕ್ಷ ಮೂಲ ಮೊತ್ತದಲ್ಲಿದ್ದ ಶಾರೂಖ್​ ಖಾನ್​ರನ್ನ ಖರೀದಿ ಮಾಡಿದ ಬಳಿಕ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕಡೆ ಮುಖ ಮಾಡಿದ ನೋಡಿದ ಪ್ರೀತಿ ಝಿಂಟಾ, ನಾನು ಶಾರೂಖ್​ರನ್ನ ಪಡೆದಿದ್ದೇವೆ ಎಂದು ಹೇಳಿದ್ದಾರೆ.

25 ವರ್ಷದ ಆಲ್​ರೌಂಡರ್​ ಶಾರೂಖ್​ ಖಾನ್​​ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದಾರೆ. 2018ರಲ್ಲಿ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಮೂಲಕ ಟಿ 20ಗೆ ಪದಾರ್ಪಣೆ ಮಾಡಿದ ಶಾರೂಖ್​​ ಖಾನ್​​ ತಮಿಳುನಾಡು ಪ್ರೀಮಿಯರ್ ಲೀಗ್​​ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ.

ಪ್ರೀತಿ ಝಿಂಟಾ ಕ್ರಿಕೆಟಿಗ ಶಾರೂಖ್​ ಖಾನ್​ರನ್ನ ಖರೀದಿ ಮಾಡುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆಯೇ ಹರಿದಿದೆ. ಐಪಿಎಲ್​ ಅಧಿಕೃತ ಟ್ವಿಟರ್ ಖಾತೆಯಲ್ಲೂ ಪ್ರೀತಿ ಜಿಂಟಾ ಕೆಕೆಆರ್​ ಟೇಬಲ್​ ಕಡೆ ಮುಖ ಮಾಡಿ ಮಾತನಾಡುತ್ತಿರೋ ವಿಡಿಯೋವನ್ನ ಶೇರ್​ ಮಾಡಲಾಗಿದ್ದು ವಿಡಿಯೋ ವೈರಲ್​ ಆಗಿದೆ.

— IndianPremierLeague (@IPL) February 18, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...