alex Certify BREAKING NEWS: ಪ್ಯಾರಾಲಂಪಿಕ್ಸ್ ನಲ್ಲಿ ಶಿವಮೊಗ್ಗದ IAS ಅಧಿಕಾರಿಗೆ ಬೆಳ್ಳಿ ಪದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಪ್ಯಾರಾಲಂಪಿಕ್ಸ್ ನಲ್ಲಿ ಶಿವಮೊಗ್ಗದ IAS ಅಧಿಕಾರಿಗೆ ಬೆಳ್ಳಿ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತದ ಸುಹಾಸ್ ಎಲ್. ಯತಿರಾಜ್, ಚಿನ್ನದ ಪದಕ ಗೆಲ್ಲುವ ಗುರಿ ಮಿಸ್ ಆಗಿದ್ದು, ಬೆಳ್ಳಿ ಪದಕ ಗಳಿಸಿದ್ದಾರೆ.

ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಎದುರಾಳಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದ್ದರು.

ಪ್ಯಾರಾ-ಶಟ್ಲರ್ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ ಎಸ್‌ಎಲ್ 4 ವಿಭಾಗದ ಚಿನ್ನದ ಪದಕ ಪಂದ್ಯವನ್ನು 21-15, 17-21, 15-21ರಿಂದ ಸೋತ ನಂತರ 2020 ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಸುಹಾಸ್ ಎಲ್ ವೈ. 2007ರ ಬ್ಯಾಚಿನ ಉತ್ತರಪ್ರದೇಶ ಕೆಡರ್ ಐಎಎಸ್ ಅಧಿಕಾರಿಯಾಗಿದ್ದು, CM ಯೋಗಿ ಆದಿತ್ಯನಾಥ್ ರ ಮೆಚ್ಚಿನ ಅಧಿಕಾರಿ. ಕುಂಭಮೇಳವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಪ್ರಸ್ತುತ ಗೌತಮ ಬುದ್ಧ ನಗರ ಡಿಸಿಯಾಗಿದ್ದಾರೆ.

ಇವರು ಶಿವಮೊಗ್ಗದ ಡಿವಿಎಸ್‌ ಕಾಲೇಜಿನ ಹಳೇಯ ವಿದ್ಯಾರ್ಥಿ. ಪದವಿಪೂರ್ವ ಶಿಕ್ಷಣದ ಬಳಿಕ ಎನ್ಐಟಿಕೆ ಸುರತ್ಕಲ್ ನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿಯನ್ನು 2004ರಲ್ಲಿ ಪಡೆದುಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...