alex Certify ಬ್ರೆಜಿಲ್ ಡೆಫ್ ಒಲಿಂಪಿಕ್ ಗೆ ಧಾರವಾಡದ ನಿಧಿ ಆಯ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೆಜಿಲ್ ಡೆಫ್ ಒಲಿಂಪಿಕ್ ಗೆ ಧಾರವಾಡದ ನಿಧಿ ಆಯ್ಕೆ

ಧಾರವಾಡ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ, ಪ್ರಾಂಶುಪಾಲ ಡಾ.ಸರಸ್ವತಿ ಆರ್. ಕಳಸದ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಆರ್.ಬಿ. ಸೊನೇಖಾನ ಹಾಗೂ ಸಿ.ಡಿ.ಸಿ ಸಮಿತಿ ಸದಸ್ಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...