alex Certify ಪಾಕ್‌ ತಂಡದ ಕಳಪೆ ಫೀಲ್ಡಿಂಗ್‌ ಗೆ ಅಣಕವಾಡಿದ ಪ್ರೇಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್‌ ತಂಡದ ಕಳಪೆ ಫೀಲ್ಡಿಂಗ್‌ ಗೆ ಅಣಕವಾಡಿದ ಪ್ರೇಕ್ಷಕ

ಈ ಪಾಕಿಸ್ತಾನ ಕ್ರಿಕೆಟ್‌ ಟೀಂನದ್ದು ಯಾವಾಗಲೂ ಒಂದೇ ರೋದನೆ — ಕಳಪೆ ಫೀಲ್ಡಿಂಗ್. ಫಿಟ್ನೆಸ್ ‌ಅನ್ನೇ ಮೂಲಮಂತ್ರವಾಗಿಸಿಕೊಂಡಿರುವ ಆಧುನಿಕ ಕ್ರಿಕೆಟ್‌ನಲ್ಲೂ ಸಹ ಪಾಕ್‌ ತಂಡದ ಆಟಗಾರರದ್ದು ಅದೇ ಚಾಳಿ ಎಂಬಂತಾಗಿದೆ.

ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ, ಆತಿಥೇಯರ ವಿರುದ್ಧ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್‌ನಲ್ಲಿ ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತಲೇ ಸಾಗಿದೆ. ಪಾಕ್ ಆಟಗಾರರ ಈ ಕೆಟ್ಟ ಆಟವನ್ನು ಅಣಕ ಮಾಡಿದ ಆತಿಥೇಯ ತಂಡದ ಅಭಿಮಾನಿಯೊಬ್ಬರು, ಬೋರ್ಡ್ ಒಂದನ್ನು ಹಿಡಿದು, ಪಾಕ್ ಆಟಗಾರರು ಚೆಲ್ಲಿದ ಕ್ಯಾಚ್‌ಗಳು, ಮಾಡಿದ ಮಿಸ್ ‌ಫೀಲ್ಡ್‌ಗಳು, ಕೆಟ್ಟ ಥ್ರೋಗಳು ಹಾಗೂ ಡಿಆರ್‌‌ಎಸ್‌ ಆಯ್ಕೆ ಮಾಡಿಕೊಳ್ಳುವ ವೇಳೆ ತೋರಿದ ತಪ್ಪು ನಿರ್ಣಯಗಳ ಪಟ್ಟಿ ಮಾಡಿ ಕ್ಯಾಮೆರಾಗೆ ಹಿಡಿದಿದ್ದಾರೆ.

ಈತ ಈಗ ಕೇವಲ ಲೈವ್‌ ಮ್ಯಾಚ್‌ ವೇಳೆ ಕ್ಯಾಮೆರಾದಲ್ಲಿ ಬಂದಿದ್ದು ಮಾತ್ರವಲ್ಲದೇ, ಕಾಮೆಂಟೇಟರ್‌ಗಳಿಂದ ಶ್ಲಾಘನೆ ಪಡೆದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದ್ದಾರೆ. ಟ್ವಿಟರ್‌ ಬಳಕೆದಾರರೊಬ್ಬರು ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದು, “ಕ್ರಿಕೆಟ್ ಮ್ಯಾಚ್‌ಗಳನ್ನು ನೋಡಲು ಹೋಗುವ ರೀತಿ ಅಂದ್ರೆ ಇದು” ಎಂದು ಅದಕ್ಕೆ ಕ್ಯಾಪ್ಷನ್‌ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...