alex Certify ಈ ವಿಷ್ಯದಲ್ಲಿ ನಟ ಅಕ್ಷಯ್‌ ಕುಮಾರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಷ್ಯದಲ್ಲಿ ನಟ ಅಕ್ಷಯ್‌ ಕುಮಾರ್ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಡಿಗೆ ಇನ್ನೊಂದು ಕಿರೀಟ ಬಿದ್ದಿದೆ. ವಿರಾಟ್ ಕೊಹ್ಲಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ರನ್ನು ಹಿಂದಿಕ್ಕಿ ಬ್ರ್ಯಾಂಡ್ ವ್ಯಾಲೂ ವಿಷ್ಯದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಡಫ್ & ಫೆಲ್ಪ್ಸ್ ವಾರ್ಷಿಕ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ವಾರ್ಷಿಕ ಬ್ರಾಂಡ್ ಮೌಲ್ಯ 237.6 ಮಿಲಿಯನ್ ಅಮೆರಿಕನ್ ಡಾಲರ್. ಆಡಿ, ವಿಕ್ಸ್, ಟು ಯಮ್, ಹೀರೋ ಸೇರಿದಂತೆ ಹಲವು ಬ್ರಾಂಡ್‌ಗಳು ಕೊಹ್ಲಿ ಕೈನಲ್ಲಿದೆ.

ಕೊಹ್ಲಿ ನಂತ್ರದ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೆಸರಿದೆ. ಅಕ್ಷಯ್ ಕುಮಾರ್ ಬ್ರಾಂಡ್ ಮೌಲ್ಯ 118.9 ಮಿಲಿಯನ್ ಅಮೆರಿಕನ್ ಡಾಲರ್. ನಂತ್ರದಲ್ಲಿ ಬರೋದು ರಣವೀರ್ ಸಿಂಗ್. ಅವ್ರ ಬ್ಯಾಂಡ್ ಮೌಲ್ಯ 102.9 ಮಿಲಿಯನ್ ಅಮೆರಿಕನ್ ಡಾಲರ್.

ಸದ್ಯ ಸಿನಿಮಾಗಳಿಂದ ದೂರವಿದ್ರೂ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಬ್ರಾಂಡ್ ಮೌಲ್ಯ ಕುಸಿದಿಲ್ಲ. ಅವ್ರು 51.1 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದ್ದಾರೆ. ಶಾರುಕ್ ನಂತ್ರದ ಸ್ಥಾನದಲ್ಲಿ ನಟಿ ದೀಪಿಕಾ ಪಡುಕೋಣೆ ಇದ್ದಾರೆ. ಅವ್ರ ಬ್ರಾಂಡ್ ಮೌಲ್ಯ 50.4 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...