alex Certify ಸ್ವಾತಂತ್ರ್ರ್ಯ ದಿನದಂದೇ ಕ್ರಿಕೆಟ್ ಪ್ರೇಮಿಗಳಿಗೆ ಧೋನಿ ಬಿಗ್ ಶಾಕ್: ಗುರುವಿನ ದಾರಿ ಹಿಡಿದ ಶಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾತಂತ್ರ್ರ್ಯ ದಿನದಂದೇ ಕ್ರಿಕೆಟ್ ಪ್ರೇಮಿಗಳಿಗೆ ಧೋನಿ ಬಿಗ್ ಶಾಕ್: ಗುರುವಿನ ದಾರಿ ಹಿಡಿದ ಶಿಷ್ಯ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ನಿಂದ ದೂರ ಉಳಿದಿದ್ದರು.

ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕ ಧೋನಿ, ಐಪಿಎಲ್ ನಲ್ಲಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ವರ್ಷ ಅವರು ಐಪಿಎಲ್ ನಲ್ಲಿ ಆಡಲಿದ್ದಾರೆ.

ಎಂಎಸ್ ಧೋನಿ ಭಾರತಕ್ಕೆ ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟು ಯಶಸ್ವಿ ನಾಯಕನಾಗಿದ್ದಾರೆ.

90 ಟೆಸ್ಟ್ ಪಂದ್ಯಗಳಲ್ಲಿ 6 ಶತಕ, 1 ದ್ವಿಶತಕ ಸೇರಿದಂತೆ 4876 ರನ್ ಗಳಿಸಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 10 ಶತಕ, 73 ಅರ್ಧ ಶತಕ ಸಹಿತ 10773 ರನ್ ಗಳಿಸಿದ್ದಾರೆ. 98 ಟಿ20 ಪಂದ್ಯಗಳಲ್ಲಿ 2 ಅರ್ಧ ಶತಕ ಸಹಿತ 1617 ರನ್ ಗಳಿಸಿದ್ದಾರೆ. 190 ಐಪಿಎಲ್ ಪಂದ್ಯಗಳಲ್ಲಿ 23 ಅರ್ಧ ಶತಕ ಸಹಿತ 4432 ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿರುವ ಧೋನಿ ಐಪಿಎಲ್ ನಲ್ಲಿ ಮುಂದುವರೆಯಲಿದ್ದಾರೆ. 16 ವರ್ಷ ಅವರು ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ನಿವೃತ್ತಿ ಬಗ್ಗೆ ಮಾಹಿತಿ ನೀಡಿದ ಅವರು, ಇದುವರೆಗೂ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಕೊನೆಯ ಓವರ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅತಿ ಹೆಚ್ಚು ರನ್ ಕಲೆ ಹಾಕುತ್ತಿದ್ದ ಮತ್ತು ವಿಕೆಟ್ ಗಳ ನಡುವೆ ಮಿಂಚಿನಂತೆ ಓಡುತ್ತಿದ್ದ ಧೋನಿ ಆಟವನ್ನು ನೋಡುವುದೇ ಅಭಿಮಾನಿಗಳಿಗೆ ಸೊಬಗು. ಹೆಲಿಕಾಪ್ಟರ್ ಶಾಟ್ ಗಳಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದ್ದವು. ಇನ್ನು ಐಪಿಎಲ್ ನಲ್ಲಿ ಮಾತ್ರ ಅವರ ಆಟವನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎನ್ನಲಾಗಿದೆ.

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಹೇಳಿದ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಗುರುವಿನ ದಾರಿಯಲ್ಲಿ ಸಾಗಿದ್ದಾರೆ.

18 ಟೆಸ್ಟ್ ಪಂದ್ಯಗಳಿಂದ ಒಂದು ಶತಕ, 7 ಅರ್ಧಶತಕ ಸಹಿತ 768 ರನ್ ಗಳಿಸಿರುವ ರೈನಾ 226 ಏಕದಿನ ಪಂದ್ಯಗಳಲ್ಲಿ 5 ಶತಕ, 36 ಅರ್ಧಶತಕ ಸಹಿತ 5615 ರನ್ ಗಳಿಸಿದ್ದಾರೆ.

78 ಟಿ20 ಪಂದ್ಯಗಳನ್ನು ಆಡಿರುವ ಅವರು ಒಂದು ಶತಕ 5 ಅರ್ಧಶತಕಗಳೊಂದಿಗೆ 1604 ರನ್ ಗಳಿಸಿದ್ದಾರೆ. 193 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ 1 ಶತಕ, 38 ಅರ್ಧ ಶತಕ ಸಹಿತ 5368 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 13, ಏಕದಿನ ಪಂದ್ಯಗಳಲ್ಲಿ 36, ಟಿ20 ಯಲ್ಲಿ 13, ಐಪಿಎಲ್ ನಲ್ಲಿ 25 ವಿಕೆಟ್ ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...