alex Certify ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ ಯುವ ಕ್ರಿಕೆಟಿಗ ಮೊಹಮ್ಮದ್​​ ಅಜರುದ್ದೀನ್​ ಡ್ರೀಮ್ ಲಿಸ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ ಯುವ ಕ್ರಿಕೆಟಿಗ ಮೊಹಮ್ಮದ್​​ ಅಜರುದ್ದೀನ್​ ಡ್ರೀಮ್ ಲಿಸ್ಟ್..!

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಪಂದ್ಯದಲ್ಲಿ ಕೇರಳ ಓಪನರ್​ ಮೊಹಮ್ಮದ್​ ಅಜರುದ್ದೀನ್​​ ತಮ್ಮ ಸ್ಪೋಟಕ ಬ್ಯಾಟಿಂಗ್​ ಶೈಲಿ ಮೂಲಕ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ.‌

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಕೂಡ ಟ್ವಿಟರ್​ನಲ್ಲಿ ಅಜರುದ್ದೀನ್​​ ಇನ್ನಿಂಗ್ಸ್​ ಪ್ರದರ್ಶನ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ 197 ರನ್​ಗಳ ಕಠಿಣ ಗುರಿಯನ್ನ ಬೆನ್ನಟ್ಟಿದ ಅಜರುದ್ದೀನ್​ 10 ಸಿಕ್ಸ್ ಹಾಗೂ 9 ಬೌಂಡರಿಗಳನ್ನ ಬಾರಿಸಿದ್ದಾರೆ. 54 ಎಸೆತಗಳಲ್ಲಿ 137 ರನ್​ಗಳನ್ನ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಕೇವಲ 17 ಓವರ್​ಗಳಲ್ಲಿ ಕೇರಳ ತಂಡ ಗೆಲವು ಸಾಧಿಸುವಂತೆ ಮಾಡುವಲ್ಲಿ ಅಜರುದ್ದೀನ್​ ಪಾತ್ರ ಮಹತ್ವದಾಗಿತ್ತು.

ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಇತಿಹಾಸದಲ್ಲೇ ಅಜರುದ್ದೀನ್​ ಎರಡನೇ ಅತಿ ವೇಗದ ಶತಕ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2018ರಲ್ಲಿ ರಿಷಭ್​ ಪಂತ್​​ 32 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದ್ದರು.

ಇನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಅಜರುದ್ದೀನ್​ ಸಾಧನೆ ಕಂಡ ಸ್ಥಳೀಯ ನ್ಯೂಸ್​ ಚಾನೆಲ್​ ವೊಂದು ಕಾಸರಗೋಡಿನಲ್ಲಿರುವ ಪ್ರತಿಭಾವಂತ ಕ್ರಿಕೆಟಿಗನ ನಿವಾಸಕ್ಕೆ ಭೇಟಿ ನೀಡಿ ಸಂದರ್ಶನ ನಡೆಸಿತು. ಸಂದರ್ಶನದ ವೇಳೆ ಅಜರುದ್ದೀನ್​ ತಮ್ಮ ಗುರಿಗಳ ಲಿಸ್ಟ್​ ಬರೆದು ಅಂಟಿಸಿದ್ದ ಚೀಟಿಯೊಂದು ಮಾಧ್ಯಮದ ಕಣ್ಣಿಗೆ ಬಿದ್ದಿದೆ. ಈ ಲಿಸ್ಟ್​ನಲ್ಲಿ ಅಜರುದ್ದೀನ್​ ಐಪಿಲ್​, ರಣಜಿ ಪಂದ್ಯದಲ್ಲಿ ನಾಲ್ಕು ಶತಕ, ಸ್ವಂತ ಮನೆ, ಬೆಂಜ್​ ಕಾರು ಹಾಗೂ 2023ರಲ್ಲಿ ವಿಶ್ವಕಪ್​ ಪಂದ್ಯದ ಟೀಂ ಇಂಡಿಯಾ ತಂಡದಲ್ಲಿ ಭಾಗಿಯಾಗುವ ಕನಸನ್ನ ಹೊಂದಿದ್ದಾರೆ. ಅಜರುದ್ದೀನ್​ ಕನಸಿನ ಲಿಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ .

Follow the match ? https://t.co/V6H1Yp60Vs pic.twitter.com/Nrh88uOOFU

— BCCI Domestic (@BCCIdomestic) January 13, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...