alex Certify IPL ವೃತ್ತಿ ಜೀವನದ 200 ನೇ ಪಂದ್ಯದಲ್ಲಿ CSK ನಾಯಕ ಧೋನಿಗೆ ಭರ್ಜರಿ ಗೆಲುವಿನ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ವೃತ್ತಿ ಜೀವನದ 200 ನೇ ಪಂದ್ಯದಲ್ಲಿ CSK ನಾಯಕ ಧೋನಿಗೆ ಭರ್ಜರಿ ಗೆಲುವಿನ ಗಿಫ್ಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎಲ್ಲಾ ವಿಭಾಗಗಳಲ್ಲಿಯೂ ಮಾಡಿಸಿದ ಧೋನಿ ಪಡೆ ಭರ್ಜರಿ ಜಯ ಗಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಐಪಿಎಲ್ ವೃತ್ತಿ ಜೀವನದ 200ನೇ ಪಂದ್ಯದಲ್ಲಿ ಗೆಲುವಿನ ಉಡುಗೊರೆ ಪಡೆದುಕೊಂಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತು. ಪಂಜಾಬ್ 26 ರನ್ ಗಳಿಗೆ ಐವರು ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡಿದ್ದು ಇದರಲ್ಲಿ ನಾಲ್ಕು ವಿಕೆಟ್ ಗಳನ್ನು ದೀಪಕ್ ಚಹರ್ ಪಡೆದಿದ್ದರು. ಆಗಲೇ ಪಂಜಾಬ್ ಸೋಲಿನತ್ತ ಮುಖಮಾಡಿತ್ತು.

ಚೆನ್ನೈ ತಂಡ 15.4 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಗೆಲುವು ಕಂಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡಿತು ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡಿ ಪಂಜಾಬ್ ತಂಡವನ್ನು ಮಣಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಧೋನಿ 200 ನೇ ಪಂದ್ಯವಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಂಪಿಯನ್ಸ್ ಟಿ-20 ಲೀಗ್ ನಲ್ಲಿ ಅವರು 24 ಪಂದ್ಯಗಳನ್ನು ಆಡಿದ್ದು, ಅವುಗಳನ್ನು ಬಿಟ್ಟರೆ 176 ಪಂದ್ಯ ಆಡಿದ್ದಾರೆ. ಪುಣೆ ಸೂಪರ್ ಜೈಂಟ್ಸ್ ಪರವಾಗಿ ಧೋನಿ 30 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್ ನಲ್ಲಿ ಗರಿಷ್ಠ 206 ಪಂದ್ಯವಾಡಿದ ಮೊದಲ ಆಟಗಾರ ಕೂಡ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...