alex Certify IPL AUCTION 2021: 14 ಕೋಟಿಗೆ ಮಾರಾಟವಾದ ರಿಚರ್ಡ್ ಸನ್ – ಡೇವಿಡ್ ಮಲನ್ ಗೆ ನಿರಾಶೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL AUCTION 2021: 14 ಕೋಟಿಗೆ ಮಾರಾಟವಾದ ರಿಚರ್ಡ್ ಸನ್ – ಡೇವಿಡ್ ಮಲನ್ ಗೆ ನಿರಾಶೆ

ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ಮತ್ತು ವಿಶ್ವ ನಂಬರ್ 1 ಟಿ 20 ಬ್ಯಾಟ್ಸ್ ಮನ್ ಡೇವಿಡ್ ಮಲನ್ ರಿಗೆ ನಿರಾಸೆಯಾಗಿದೆ. ಮಲನ್‌ರನ್ನು ಅತಿ ಹೆಚ್ಚು ಹಣಕ್ಕೆ ಖರೀದಿ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದ್ರೆ ಮಲನ್ 1.5 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಅವ್ರನ್ನು ಪಂಜಾಬ್ ತಂಡ ಖರೀದಿ ಮಾಡಿದೆ.

ಇನ್ನು ಅಲೆಕ್ಸ್ ಕ್ಯಾರಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಗೆ ಹಿನ್ನಡೆಯಾಗಿದೆ. ಯಾವುದೇ ತಂಡ ಈ ಆಟಗಾರರನ್ನು ಖರೀದಿಸಿಲ್ಲ. ಶ್ರೀಲಂಕಾದ ಕುಸಲ್ ಪೆರೆರಾ, ಗ್ಲೆನ್ ಫಿಲಿಪ್ಸ್, ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಯಾವುದೇ ಫ್ರ್ಯಾಂಚೈಸ್ ಖರೀದಿಸಿಲ್ಲ. ಆಸ್ಟ್ರೇಲಿಯಾದ ಯುವ ಆಟಗಾರ ಝೈ ರಿಚರ್ಡ್‌ಸನ್‌ರನ್ನು ಪಂಜಾಬ್ ಕಿಂಗ್ಸ್ 14 ಕೋಟಿಗಳಿಗೆ ಖರೀದಿಸಿದೆ. ಈ ಆಟಗಾರನ ಮೂಲ ಬೆಲೆ 1.50 ಕೋಟಿಯಾಗಿತ್ತು. ಇನ್ನು ಮುಂಬೈ ಇಂಡಿಯನ್ಸ್ ಆಡಮ್ ಮಿಲ್ನೆ ಅವರನ್ನು 3.2 ಕೋಟಿಗೆ ಖರೀದಿಸಿದೆ.

IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ

ನಾಥನ್ ಕೌಲ್ಟರ್-ನೈಲ್ ಅವರನ್ನು ಮುಂಬೈ ಇಂಡಿಯನ್ಸ್ 5 ಕೋಟಿಗೆ ಖರೀದಿಸಿದೆ. ಉಮೇಶ್ ಯಾದವ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ಖರೀದಿಸಿದೆ. ದೆಹಲಿ ಕ್ಯಾಪಿಟಲ್ಸ್ ಉಮೇಶ್ ಯಾದವ್ ಅವರನ್ನು 1 ಕೋಟಿ ಮೂಲ ಬೆಲೆಗೆ ಖರೀದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...