alex Certify IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ

ಐಪಿಎಲ್ ಆಟಗಾರರ ಹರಾಜು ಚೆನ್ನೈನಲ್ಲಿ ನಡೆಯುತ್ತಿದೆ. 8 ಫ್ರ್ಯಾಂಚೈಸಿಗಳು 61 ಆಟಗಾರರನ್ನು ಖರೀದಿ ಮಾಡಲಿವೆ. ಕರುಣ್ ನಾಯರ್ ಮೂಲಕ ಹರಾಜು ಶುರುವಾಗಿದೆ. ಅವರ ಮೂಲ ಬೆಲೆ 50 ಲಕ್ಷವಾಗಿದ್ದು, ಅವರನ್ನ ಯಾವುದೇ ಫ್ರ್ಯಾಂಚೈಸಿ ಖರೀದಿಸಿಲ್ಲ.

ಇನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ರನ್ನು ದೆಹಲಿ ಕ್ಯಾಪಿಟಲ್ಸ್ ಖರೀದಿಸಿದೆ. ಅವರನ್ನು 2.20 ಕೋಟಿಗೆ ಖರೀದಿ ಮಾಡಲಾಗಿದೆ. ಅವರ ಮೂಲ ಬೆಲೆ 2 ಕೋಟಿ ರೂಪಾಯಿಯಾಗಿತ್ತು. ಹಿಂದಿನ ವರ್ಷ ಸ್ಮಿತ್ ರಾಜಸ್ತಾನ ತಂಡದಲ್ಲಿದ್ದರು. ಇದೇ ವೇಳೆ  ಭಾರತೀಯ ತಂಡದ ಹನುಮ ವಿಹಾರಿ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಅಲೆಕ್ಸ್ ಹೇಲ್ಸ್ ಅವರನ್ನು ಯಾವುದೇ ಫ್ರ್ಯಾಂಚೈಸಿ ಖರೀದಿಸಿಲ್ಲ.

ಇನ್ನು ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದಿಂದ ಬಿಡುಗಡೆಯಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು ಬೆಂಗಳೂರು ತಂಡ ಖರೀದಿ ಮಾಡಿದೆ. ಐಪಿಎಲ್ ಹರಾಜು 2021 ರಲ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿಗೆ ಖರೀದಿಸಿದೆ.

ನಿಷೇಧದ ನಂತರ ಹಿಂದಿರುಗಿದ್ದ ಶಾಕೀಬ್ ಅಲ್ ಹಸನ್ ರನ್ನು ಕೋಲ್ಕತಾ ನೈಟ್ ರೈಡರ್ಸ್ 3.2 ಕೋಟಿಗೆ ಖರೀದಿಸಿದೆ. ಇದಕ್ಕೂ ಮೊದಲು ಹಸನ್ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...