alex Certify IPL AUCTION 2021: ಯುವರಾಜ್ ಸಿಂಗ್ ದಾಖಲೆ ಮುರಿದ ಕ್ರಿಸ್ ಮೋರಿಸ್ – 16 ಕೋಟಿ 25 ಲಕ್ಷಕ್ಕೆ ರಾಜಸ್ತಾನದ ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL AUCTION 2021: ಯುವರಾಜ್ ಸಿಂಗ್ ದಾಖಲೆ ಮುರಿದ ಕ್ರಿಸ್ ಮೋರಿಸ್ – 16 ಕೋಟಿ 25 ಲಕ್ಷಕ್ಕೆ ರಾಜಸ್ತಾನದ ಪಾಲು

ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಮುಂದುವರೆದಿದೆ. ಇಂಗ್ಲೆಂಡ್ ಆಲ್‌ರೌಂಡರ್ ಮೊಯಿನ್ ಅಲಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ. ಸಿಎಸ್‌ಕೆ ಅವರನ್ನು 7 ಕೋಟಿಗೆ ಖರೀದಿಸಿದೆ. ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಿದ್ದ ಶಿವಂ ದುಬೆ ಅವರನ್ನು ರಾಜಸ್ಥಾನ್ ರಾಯಲ್ಸ್  4 ಕೋಟಿ 40 ಲಕ್ಷಕ್ಕೆ ಖರೀದಿಸಿದೆ.

ಚೆನ್ನೈ ಸೂಪರ್ ಕಿಂಗ್ ತಂಡ ಈ ವರ್ಷ ಕೇದಾರ್ ಜಾಧವ್ ಅವರನ್ನು ತಂಡದಿಂದ ಹೊರ ಹಾಕಿತ್ತು. ಈಗ ಹರಾಜಿನಲ್ಲಿ ಅವರಿಗೆ ಆಘಾತವಾಗಿದೆ. ಯಾವುದೇ ತಂಡ ಕೇದಾರ್ ಜಾಧವ್ ಅವ್ರನ್ನು ಖರೀದಿ ಮಾಡಿಲ್ಲ.

IPL AUCTION 2021: ಬೆಂಗಳೂರು ತಂಡಕ್ಕೆ ಮ್ಯಾಕ್ಸ್ ವೆಲ್ – ಬರೋಬ್ಬರಿ 14.25 ಕೋಟಿ ರೂಪಾಯಿಗೆ ಬಿಕರಿ

ಇನ್ನು ಐಪಿಎಲ್‌ ಹರಾಜಿನಲ್ಲಿ ಕ್ರಿಸ್ ಮೋರಿಸ್ ಅಬ್ಬರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಅವರನ್ನು 16 ಕೋಟಿ 25 ಲಕ್ಷಕ್ಕೆ ಖರೀದಿ ಮಾಡಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಅವ್ರನ್ನು ಖರೀದಿಸಿದೆ. ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮೋರಿಸ್ ಮುರಿದಿದ್ದಾರೆ. ಯುವರಾಜ್ 16 ಕೋಟಿಗೆ ಮಾರಾಟವಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...