alex Certify IPL 2022 Mega Auction: ಲಖ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ BCCI ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL 2022 Mega Auction: ಲಖ್ನೋ, ಅಹಮದಾಬಾದ್ ಫ್ರಾಂಚೈಸಿಗಳಿಗೆ BCCI ಅನುಮತಿ

ನವದೆಹಲಿ: ಐಪಿಎಲ್ ನಲ್ಲಿ ಲಖ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ಅನುಮತಿ ನೀಡಲಾಗಿದೆ. ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.

ಅಹಮದಾಬಾದ್ ಮತ್ತು ಲಖ್ನೋ ಫ್ರಾಂಚೈಸಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಔಪಚಾರಿಕವಾಗಿ ಅನುಮತಿ ನೀಡಲಾಗಿದೆ. ತಮ್ಮ ಡ್ರಾಫ್ಟ್ ಆಯ್ಕೆ ಅಂತಿಮಗೊಳಿಸಲು ಎರಡು ವಾರ ಕಾಲಾವಕಾಶ ನೀಡಲಾಗಿದೆ. ಫೆಬ್ರವರಿ 12, 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಹರಾಜು ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್ 2022 ಮೆಗಾ ಹರಾಜು) ಆಡಳಿತ ಮಂಡಳಿಯು ಹೊಸ ಐಪಿಎಲ್ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್‌ಗೆ ಮಂಗಳವಾರ ಔಪಚಾರಿಕ ಅನುಮೋದನೆಯನ್ನು ನೀಡಿದೆ. ಇದರೊಂದಿಗೆ ಬಿಸಿಸಿಐ ಮೆಗಾ ಹರಾಜಿಗೂ ಮುನ್ನ ಎರಡೂ ತಂಡಗಳಿಗೆ ಆಟಗಾರರ ಆಯ್ಕೆಗೆ ಕಾಲಮಿತಿಯನ್ನೂ ನೀಡಿದೆ.

ಆರ್‌ಪಿಎಸ್‌ಜಿ ಗ್ರೂಪ್ ಮತ್ತು ಖಾಸಗಿ ಹೂಡಿಕೆ ಸಂಸ್ಥೆ ಸಿವಿಸಿ ಕಳೆದ ಅಕ್ಟೋಬರ್‌ನಲ್ಲಿ ಕ್ರಮವಾಗಿ ಲಖ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ಬಿಡ್ ಮಾಡಿತ್ತು. ಸಿವಿಸಿಯು ಭಾರತದ ಹೊರಗಿನ ಬೆಟ್ಟಿಂಗ್ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ತಿಳಿದುಬಂದ ಕಾರಣ ಉದ್ದೇಶ ಪತ್ರವನ್ನು ವಿಳಂಬಗೊಳಿಸಲಾಯಿತು.

ಬಿಸಿಸಿಐ ತನ್ನ ಕಾನೂನು ತಂಡದ ಸಹಾಯದಿಂದ CVC ಯ ಬಿಡ್ ಅನ್ನು ತೆರವುಗೊಳಿಸುವ ಮೊದಲು ಸಮಸ್ಯೆ ತನಿಖೆ ಮಾಡಲು ಸಮಯ ತೆಗೆದುಕೊಂಡಿತು. ಸಭೆಯ ನಂತರ, ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಆಡಳಿತ ಮಂಡಳಿಯು ಇಂದು ಬಿಡ್‌ಗಳನ್ನು ಅನುಮೋದಿಸಿದೆ ಎಂದು ಹೇಳಿದ್ದಾರೆ.

ಉದ್ದೇಶ ಪತ್ರವನ್ನು ನೀಡುವುದರಿಂದ ಈ ಎರಡೂ ತಂಡಗಳು ಔಪಚಾರಿಕವಾಗಿ ಐಪಿಎಲ್‌ನ ಭಾಗವಾಗಲಿದ್ದು, ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹರಾಜಿನ ಮೊದಲು ಆಟಗಾರರನ್ನು ಆಯ್ಕೆ ಮಾಡುವ ಹಕ್ಕನ್ನು ಪಡೆಯುತ್ತವೆ. ಎರಡೂ ಫ್ರಾಂಚೈಸಿಗಳು ಈಗಾಗಲೇ ತಮ್ಮ ಸಿಬ್ಬಂದಿ ನೇಮಿಸಿಕೊಂಡಿವೆ.

ಕೆಎಲ್ ರಾಹುಲ್ ಅಹಮದಾಬಾದ್‌ ಮತ್ತು ಹಾರ್ದಿಕ್ ಪಾಂಡ್ಯ ಲಖ್ನೋ ತಂಡದ ನಾಯಕತ್ವ ಪಡೆಯುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...