alex Certify ಕ್ರಿಸ್ ​ಗೇಲ್ ಕುರಿತ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಮಹಮ್ಮದ್​ ಶಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್ ​ಗೇಲ್ ಕುರಿತ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಮಹಮ್ಮದ್​ ಶಮಿ

ವೆಸ್ಟ್​ ಇಂಡೀಸ್​ ಆಟಗಾರ ಕ್ರಿಸ್​ ಗೇಲ್​ ಇಂಡಿಯನ್​ ಪ್ರೀಮಿಯರ್​ ಲೀಗ್​​ಗೆ ಎಂಟ್ರಿ ಕೊಟ್ಟ ಬಳಿಕ ಭಾರತದಲ್ಲೂ ಅಭಿಮಾನಿಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪಂಜಾಬ್​ ಕಿಂಗ್ಸ್​ ತಂಡದಲ್ಲಿ ಮಿಂಚುತ್ತಿರೋ ಈ ಆಟಗಾರನಿಗೆ ಭಾರತದ ಮೇಲಿರುವ ಪ್ರೀತಿಯನ್ನ ಮಹಮ್ಮದ್​ ಶಮಿ ರಿವೀಲ್​ ಮಾಡಿದ್ದಾರೆ.

ಕ್ರಿಸ್​ಗೇಲ್​ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಅಭಿಮಾನಿಗಳನ್ನ ಗೆಲ್ಲೋದು ಒಂದು ಕಡೆಯಾದ್ರೆ ತಮ್ಮ ಹಿಂದಿ ಭಾಷಾ ಪ್ರೇಮದ ಮೂಲಕ ಮತ್ತಷ್ಟು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ.

ಕ್ರಿಸ್​ ಗೇಲ್​ಗೆ ಹಿಂದಿಯಲ್ಲಿ ಮಾತನಾಡೋದು ಅಂದರೆ ತುಂಬಾನೇ ಇಷ್ಟ. ಇಂಗ್ಲೀಷ್ನ​ಲ್ಲಿ ಮಾತನಾಡುವ ಕ್ರಿಸ್​ ಗೇಲ್​ ಥಟ್​​ ಅಂತಾ ಹಿಂದಿಯಲ್ಲಿ ಮಾತನಾಡೋಕೆ ಶುರು ಮಾಡ್ತಾರೆ ಅಂತಾ ಶಮಿ ಹೇಳಿದ್ದಾರೆ.

ಹಿಂದಿಯ ಜೊತೆಯಲ್ಲಿ ಇದೀಗ ನಮ್ಮ ತಂಡದಲ್ಲಿರುವ ಪಂಜಾಬಿ ಆಟಗಾರರು ಗೇಲ್​ಗೆ ಪಂಜಾಬಿ ಭಾಷೆಯನ್ನೂ ಕಲಿಸ್ತಿದ್ದಾರೆ ಎಂದು ಶಮಿ ಹೇಳಿದ್ದಾರೆ.

ಕ್ರಿಸ್​ಗೇಲ್​ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದಾರೆ. ಅವರಿಗೆ ಕ್ರಿಕೆಟ್​ ಜೀವನದಲ್ಲಿ ತುಂಬಾನೇ ಅನುಭವ ಇದೆ. ಗೇಲ್​ ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ಅವರು ಭಾರತೀಯ ಸಂಸ್ಕೃತಿಯನ್ನ ತುಂಬಾ ಇಷ್ಟ ಪಡ್ತಾರೆ ಎಂದು ಶಮಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...