2021ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.
ಈ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಅನ್ನೋದನ್ನ ಶೀಘ್ರದಲ್ಲೇ ನಿರ್ಧರಿಸಲಿದ್ದೇವೆ ಎಂದು ಹೇಳಲಾಗಿದೆ.
ಈ ಬಾರಿಯ ಐಪಿಎಲ್ ಸೀಸನ್ ಭಾರತದಲ್ಲಿಯೇ ನಡೆಯಲಿದ್ಯಾ ಇಲ್ಲವೇ ಕಳೆದ ವರ್ಷದಂತೆ ಬೇರೆ ದೇಶದಲ್ಲಿ ನಡೆಸಬೇಕಾ ಅನ್ನೋದ್ರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷದ 13ನೇ ಆವೃತ್ತಿಯ ಐಪಿಎಲ್ ಸೀಸನ್ ಸೆಪ್ಟೆಂಬರ್-ನವೆಂಬರ್ನಲ್ಲಿ ಯುಎಇನಲ್ಲಿ ನಡೆದಿತ್ತು.
ಮುಂಬೈ ಇಂಡಿಯನ್ಸ್ ತಂಡ ವೇಗಿ ಲಸಿತ್ ಮಲಿಂಗರನ್ನ ಬಿಡುಗಡೆ ಮಾಡಿದೆ. ಸಿಎಸ್ಕೆ ಹರ್ಭಜನ್ ಸಿಂಗ್, ಕಿಂಗ್ಸ್ ಇಲೆವನ್ ಪಂಜಾಬ್ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಸ್ಟೀವ್ ಸ್ಮಿತ್ರನ್ನ ಹೊರಗಿಟ್ಟಿದೆ.
ಆಶ್ಚರ್ಯ ಅಂದರೆ ರಾಯಲ್ ಚಾಲೆಂಜರ್ಸ್ ತಂಡ ಆಲ್ರೌಂಡರ್ ಕ್ರಿಸ್ ಮಾರೀಸ್ರನ್ನ ಸೇರಿದಂತೆ 10 ಮಂದಿಯನ್ನ ಕೈ ಬಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ನ ಡೇನಿಯಲ್ ಸ್ಯಾಮ್ಸ್ ಹಾಗೂ ಹರ್ಷಲ್ ಪಟೇಲ್ ಆರ್ಸಿಬಿ ತಂಡಕ್ಕೆ ಮಾರಾಟವಾಗಿದ್ದಾರೆ.