alex Certify ಐಪಿಎಲ್​ 2021ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ 2021ರ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್

2021ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.

ಈ ಹರಾಜು ಪ್ರಕ್ರಿಯೆ ಎಲ್ಲಿ ನಡೆಯಲಿದೆ ಅನ್ನೋದನ್ನ ಶೀಘ್ರದಲ್ಲೇ ನಿರ್ಧರಿಸಲಿದ್ದೇವೆ ಎಂದು ಹೇಳಲಾಗಿದೆ.

ಈ ಬಾರಿಯ ಐಪಿಎಲ್​ ಸೀಸನ್​​ ಭಾರತದಲ್ಲಿಯೇ ನಡೆಯಲಿದ್ಯಾ ಇಲ್ಲವೇ ಕಳೆದ ವರ್ಷದಂತೆ ಬೇರೆ ದೇಶದಲ್ಲಿ ನಡೆಸಬೇಕಾ ಅನ್ನೋದ್ರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷದ 13ನೇ ಆವೃತ್ತಿಯ ಐಪಿಎಲ್​ ಸೀಸನ್ ಸೆಪ್ಟೆಂಬರ್​-ನವೆಂಬರ್​​ನಲ್ಲಿ​​ ಯುಎಇನಲ್ಲಿ ನಡೆದಿತ್ತು.

ಮುಂಬೈ ಇಂಡಿಯನ್ಸ್ ತಂಡ ವೇಗಿ ಲಸಿತ್​ ಮಲಿಂಗರನ್ನ ಬಿಡುಗಡೆ ಮಾಡಿದೆ. ಸಿಎಸ್​​ಕೆ ಹರ್ಭಜನ್​ ಸಿಂಗ್​, ಕಿಂಗ್ಸ್​ ಇಲೆವನ್​ ಪಂಜಾಬ್​​ ಗ್ಲೇನ್​ ಮ್ಯಾಕ್ಸ್​ವೆಲ್​ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಸ್ಟೀವ್​ ಸ್ಮಿತ್​​​ರನ್ನ ಹೊರಗಿಟ್ಟಿದೆ.‌

ಆಶ್ಚರ್ಯ ಅಂದರೆ ರಾಯಲ್​ ಚಾಲೆಂಜರ್ಸ್​ ತಂಡ ಆಲ್​​ರೌಂಡರ್​ ಕ್ರಿಸ್​ ಮಾರೀಸ್​ರನ್ನ ಸೇರಿದಂತೆ 10 ಮಂದಿಯನ್ನ ಕೈ ಬಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ನ ಡೇನಿಯಲ್​ ಸ್ಯಾಮ್ಸ್ ಹಾಗೂ ಹರ್ಷಲ್​ ಪಟೇಲ್​ ಆರ್​ಸಿಬಿ ತಂಡಕ್ಕೆ ಮಾರಾಟವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...