alex Certify 17ನೇ ಬಾರಿ ಭಗ್ನವಾದ RCB ಕನಸು: ನಿರ್ಣಾಯಕ ಪಂದ್ಯದಲ್ಲಿ RR ವಿರುದ್ಧ ಸೋಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17ನೇ ಬಾರಿ ಭಗ್ನವಾದ RCB ಕನಸು: ನಿರ್ಣಾಯಕ ಪಂದ್ಯದಲ್ಲಿ RR ವಿರುದ್ಧ ಸೋಲು

ಅಹಮದಾಬಾದ್: ಸೋಲಿನ ಸುಳಿಯಿಂದ ಹೊರಬಂದು ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸಿದ್ದ ಆರ್.ಸಿ.ಬಿ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ ಗಳಿಂದ ಪರಾಭವಗೊಂಡಿದೆ.

ಐಪಿಎಲ್ ನಲ್ಲಿ ಚೊಚ್ಚಲ ಟ್ರೋಫಿ ಗೆದ್ದು ಹೊಸ ಅಧ್ಯಾಯ ಬರೆಯುವ ಆರ್.ಸಿ.ಬಿ. ಕನಸು ಸತತ 17ನೇ ಬಾರಿ ಭಗ್ನವಾಗಿದ್ದು, ಟೂರ್ನಿಯಿಂದಲೇ ಆರ್‌ಸಿಬಿ ಹೊರ ಬಿದ್ದಿದೆ.

ಬ್ಯಾಟಿಂಗ್ ವೈಫಲ್ಯದಿಂದ ಆರ್.ಸಿ.ಬಿ. 172 ರನ್ ಗಳಿಸಿದ್ದು, ರಾಜಸ್ಥಾನ ರಾಯಲ್ಸ್ 19 ಓವರ್ ಗಳಲ್ಲಿ 174 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಮೇ 24ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ಮುಖಾಮುಖಿಯಾಗಲಿದೆ.

ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಇನ್ನು 6 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಆರ್.ಸಿ.ಬಿ. ಕೊನೆಯ 6 ಲೀಗ್ ಪಂದ್ಯಗಳಲ್ಲಿ ನೀಡಿದ ಬ್ಯಾಟಿಂಗ್ ಲಯವನ್ನು ಕಾಯ್ದುಕೊಳ್ಳಲಿಲ್ಲ. ಮಹತ್ವದ ಪಂದ್ಯದಲ್ಲಿ ಯಾರೊಬ್ಬರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸದ ಕಾರಣ ತಂಡದ ಮೊತ್ತ 200 ದಾಟಲಿಲ್ಲ. ತಂಡ ಮೂರಂಕಿ ಮೊತ್ತ ತಲುಪುವ ಮೊದಲೇ ಪ್ರಮುಖ ಬ್ಯಾಟರ್ ಗಳು ಪೆವಿಲಿಯನ್ ಸೇರಿದ್ದರು. ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟರ್ ಗಳು ಆಸರೆಯಾಗಲಿಲ್ಲ. ಹೀಗಾಗಿ ಆರ್‌ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 172 ರನ್ ಗಳಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...