alex Certify ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿ..! ಬೇಡಿಕೆ ಈಡೇರಿಸಿದ ಯುಕೆ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿ..! ಬೇಡಿಕೆ ಈಡೇರಿಸಿದ ಯುಕೆ ಸರ್ಕಾರ

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿಯೊಂದಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯನ್ನು ಕರೆದುಕೊಂಡು ಬರಲು ಯುಕೆ ಸರ್ಕಾರ ಬಿಸಿಸಿಐಗೆ ಅವಕಾಶ ನೀಡಿದೆ.

ಈಗ ಭಾರತೀಯ ಕ್ರಿಕೆಟಿಗರು ತಮ್ಮ ಹೆಂಡತಿ ಮತ್ತು ಗೆಳತಿಯರನ್ನು ಇಂಗ್ಲೆಂಡ್‌ ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಕ್ರಿಕೆಟಿಗರು ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಬಹುದು.

ಆಗಸ್ಟ್ 6ರಿಂದ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಜೂನ್ 18ರಂದು ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂತಿಮ ಪಂದ್ಯ ನಡೆಯಲಿದೆ. ಟೀಂ ಇಂಡಿಯಾ ಸುಮಾರು ನಾಲ್ಕು ತಿಂಗಳುಗಳ ಕಾಲ ವಿದೇಶ ಪ್ರವಾಸದಲ್ಲಿರಲಿದೆ.

ಟೀಂ ಇಂಡಿಯಾ ಆಟಗಾರರು ಜೂನ್ 3ರಂದು ಲಂಡನ್ ತಲುಪಲಿದ್ದಾರೆ. ಆಟಗಾರರು 10 ದಿನ ಕ್ವಾರಂಟೈನ್ ಆಗಲಿದ್ದಾರೆ. ಪುರುಷ ಆಟಗಾರರ ಜೊತೆ ಮಹಿಳಾ ತಂಡದ ಆಟಗಾರ್ತಿಯರು ಕೂಡ ಲಂಡನ್ ಪ್ರವಾಸಕ್ಕೆ ತೆರಳಲಿದ್ದಾರೆ. ಸದ್ಯ ಎಲ್ಲ ಆಟಗಾರರು ಮುಂಬೈನಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...