alex Certify ​ಕೊಹ್ಲಿ ಬಳಿ ಕ್ಷಮೆ ಯಾಚಿಸಿದ ಅಜಿಂಕ್ಯ ಕಾರಣ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

​ಕೊಹ್ಲಿ ಬಳಿ ಕ್ಷಮೆ ಯಾಚಿಸಿದ ಅಜಿಂಕ್ಯ ಕಾರಣ ಗೊತ್ತಾ….?

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೆಡ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮಾಡಿದ ಸಣ್ಣ ತಪ್ಪಿನಿಂದಾಗಿ ಕೊಹ್ಲಿ ಶತಕ ವಂಚಿತರಾಗಿದ್ದರು.

ಈ ಪ್ರಮಾದಕ್ಕಾಗಿ ನಾನು ಕೊಹ್ಲಿ ಬಳಿ ಕ್ಷಮೆ ಯಾಚಿಸಿದ್ದೇನೆ ಎಂದು ರಹಾನೆ ಹೇಳಿದ್ದಾರೆ.

ಭೋಜನ ವಿರಾಮ ಬಳಿಕ ಟೀಂ ಇಂಡಿಯಾ ಕೇವಲ 3 ವಿಕೆಟ್​ ನಷ್ಟಕ್ಕೆ 180ಕ್ಕೂ ಹೆಚ್ಚು ರನ್​ ಗಳಿಸಿ ದೊಡ್ಡ ಮೊತ್ತವನ್ನ ಕಲೆ ಹಾಕುವ ಗುರಿ ಹೊಂದಿತ್ತು. ಆದರೆ 1 ರನ್​ ತೆಗೆದುಕೊಳ್ಳಲು ಹೋಗಿ ರಹಾನೆ ಕೊಹ್ಲಿ ರನೌಟ್​ ಆಗಲು ಕಾರಣರಾದರು. 74 ರನ್​ ಗಳಿಸಿದ್ದ ಕೊಹ್ಲಿ ಇನ್ನೇನು ಶತಕಕ್ಕೆ ಕೆಲವೇ ರನ್​ಗಳು ಬಾಕಿ ಇರೋವಾಗ ಪೆವಿಲಿಯನ್ ಹಾದಿ ಹಿಡಿಯುವಂತಾಗಿತ್ತು.

ಈ ಘಟನೆ ಬಳಿಕ ನನಗೆ ತುಂಬಾನೇ ಬೇಜಾರಾಗಿತ್ತು. ಹಾಗಾಗಿ ಪಂದ್ಯ ಮುಗಿದ ಬಳಿಕ ನಾನು ಕೊಹ್ಲಿ ಬಳಿ ಹೋಗಿ ಕ್ಷಮೆ ಯಾಚಿಸಿದೆ. ಕೊಹ್ಲಿ ಕೂಡ ಈ ಘಟನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ನನಗೆ ಕಾಣಲಿಲ್ಲ. ನನ್ನ ಕ್ಷಮೆಯನ್ನ ಅವರು ಖುಷಿಯಿಂದಲೇ ಸ್ವೀಕರಿಸಿದರು ಎಂದು ರಹಾನೆ ಹೇಳಿದ್ರು.

ನಾವಿಬ್ಬರು ಆಗ ತಂಡಕ್ಕೆ ಹೆಚ್ಚು ರನ್​ಗಳನ್ನ ನೀಡುವ ಇರಾದೆಯನ್ನ ಹೊಂದಿದ್ವಿ. ಆದರೆ ಒಮ್ಮೊಮ್ಮೆ ಕ್ರಿಕೆಟ್​​ನಲ್ಲಿ ಇಂತಹ ಘಟನೆಗಳು ನಡೆಯುತ್ತೆ. ಆಗ ಆ ಘಟನೆಗಳನ್ನ ಗೌರವಿಸಿ ಮುಂದಿನ ಹೆಜ್ಜೆ ಇಡಬೇಕಾಗುತ್ತೆ ಎಂದು ರಹಾನೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...