alex Certify ಟೀಂ ಇಂಡಿಯಾ ರನ್​ ಜೊತೆ ಸನ್ನಿ ಲಿಯೋನ್ ಲಿಂಕ್​ ಮಾಡಿದ ಟ್ರೋಲಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ರನ್​ ಜೊತೆ ಸನ್ನಿ ಲಿಯೋನ್ ಲಿಂಕ್​ ಮಾಡಿದ ಟ್ರೋಲಿಗರು..!

ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡ ಅಡಿಲೇಡ್​ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 36 ರನ್​ ಗಳಿಸುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಟೀಂ ಇಂಡಿಯಾ ಇತಿಹಾಸದಲ್ಲೇ ಇದು ಅತ್ಯಂತ ಕಡಿಮೆ ಸ್ಕೋರ್​ ಆಗಿದೆ.

ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ರೆ ಟ್ರೋಲಿಗರು ಇದೇ ವಿಚಾರವನ್ನ ಇಟ್ಟುಕ್ಕೊಂಡು ಸನ್ನಿ ಲಿಯೋನ್​ರನ್ನ ಟ್ರೋಲ್​ ಮೇಲೆ ಟ್ರೋಲ್​ ಮಾಡುತ್ತಿದ್ದಾರೆ. ಅರೆ…..! ಸನ್ನಿ ಲಿಯೋನ್​ಗೂ ಟೀಂ ಇಂಡಿಯಾ ರನ್​ಗೂ ಏನು ಸಂಬಂಧಾ ಅನ್ನೋದು ನಿಮ್ಮ ಪ್ರಶ್ನೆಯಾದರೆ…..ಈ ಟ್ರೋಲ್​ಗಳನ್ನೊಮ್ಮೆ ಪರಿಶೀಲಿಸಿ ನೋಡಿ.

ಟೀಂ ಇಂಡಿಯಾ ಸಂಪಾದಿಸಿದ 36 ರನ್​ ಸನ್ನಿ ಲಿಯೋನ್​​ಳ ಬ್ರಾ ಗಾತ್ರಕ್ಕಿಂತಲೂ ಕಡಿಮೆ ಇದೆ ಅಂತಾ ಟ್ರೋಲ್​ ಮಾಡಲಾಗಿದೆ. ಇದು ಮಾತ್ರವಲ್ಲದೇ ಸನ್ನಿ ಲಿಯೋನ್ನ ಅಂಗಾಂಗಗಳನ್ನ ಗುರಿಯಾಗಿಸಿ ಸಾಕಷ್ಟು ಟ್ರೋಲ್​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗ್ತಿದೆ.

ಆದರೆ ಈ ಟ್ರೋಲ್​ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸನ್ನಿ ಲಿಯೋನ್​ ದೇಹವನ್ನ ಈ ರೀತಿ ಕೆಳಮಟ್ಟದ ಟ್ರೋಲ್​ಗೆ ಬಳಕೆ ಮಾಡಿದ್ದು ತಪ್ಪು ಅಂತಾ ಮಹಿಳಾ ಪರ ಚಿಂತಕರು ಬೇಸರ ಹೊರಹಾಕಿದ್ದಾರೆ. ಕ್ರಿಕೆಟ್​ ವಿಚಾರಕ್ಕೆ ಬಂದರೆ ಮಹಿಳೆಯರನ್ನ ಈ ರೀತಿ ಟ್ರೋಲ್​ ಮಾಡೋದು ಇದೇ ಮೊದಲೇನಲ್ಲ. ಟೀಂ ಇಂಡಿಯಾ ನಾಯಕ ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗಲೆಲ್ಲ ಅನುಷ್ಕಾ ಶರ್ಮಾರನ್ನ ಯರ್ರಾಬಿರ್ರಿ ಟ್ರೋಲ್​ ಮಾಡಲಾಗುತ್ತೆ. ಈ ಅನುಷ್ಕಾ ಶರ್ಮಾ ಯಾವಾಗಲೂ ನೆಟ್ಟಿಗರ ಬಾಯಿಗೆ ಆಹಾರವಾಗ್ತನೇ ಇರ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...