ಹೈದರಾಬಾದ್ನಲ್ಲಿ ಸುರಿಯುತ್ತಿರೋ ಭಾರೀ ಮಳೆ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಇದೀಗ ವರುಣನ ಆರ್ಭಟದ ಬಿಸಿ ಒಲಿಂಪಿಕ್ ಮೆಡಲಿಸ್ಟ್ ಗಗನ್ ನಾರಂಗ್ಗೂ ತಟ್ಟಿದೆ. ತಿರುಮಲಗಿರಿಯಲ್ಲಿ ಶೂಟಿಂಗ್ ಅಕಾಡಮಿ ನಡೆಸುತ್ತಿದ್ದ ಗಗನ್ ಪ್ರವಾಹದಿಂದಾಗಿ ತಮ್ಮ ಗನ್, ರೈಫಲ್ ಹಾಗೂ ಡ್ರೋಣ್ಗಳನ್ನ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಗಗನ್ ಜರ್ಮನಿಯಿಂದ ಈ ರೈಫಲ್ಸ್ಗಳನ್ನ ಖರೀದಿ ಮಾಡಿದ್ರು.
ಈ ಸಂಬಂಧ ಮಾತನಾಡಿದ ಗಗನ್ ನಾರಂಗ್, ಮಳೆ ಆರ್ಭಟ ಜೋರಾಗ್ತಿದ್ದಂತೆಯೇ ನಾನು ನನ್ನ ಅಕಾಡೆಮಿ ಕ್ಲೋಸ್ ಮಾಡಿದ್ದೆ. ಅಕಾಡೆಮಿಯ ಶಟರ್ ಕೂಡ ಓಪನ್ ಮಾಡಿರಲಿಲ್ಲ. ಆದ್ರೆ ನೀರು ಒಳಗೆ ನುಗ್ಗಿದ್ದು ಎಲ್ಲಾ ರೈಫಲ್ಗಳು ಹಾಳಾಗಿವೆ ಅಂತಾ ಬೇಸರ ಹೊರಹಾಕಿದ್ರು.
ಪ್ರವಾಹದಿಂದಾಗಿ ಗಗನ್ ನಾರಂಗ್ಗೆ ಸೇರಿದ 50 ಪಿಸ್ತೂಲ್ ಹಾಗೂ 50 ರೈಫಲ್ಗಳು ಜಲಾವೃತವಾಗಿದ್ದು ಬರೋಬ್ಬರಿ 1.30 ಕೋಟಿ ರೂಪಾಯಿ ಲಾಸ್ ಆಗಿದೆ.