alex Certify ಒಲಂಪಿಕ್ ​​ನಲ್ಲಿ ಕಂಚಿನ ಪದಕ ಗೆದ್ದ 58 ವರ್ಷದ ಕ್ರೀಡಾಪಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಂಪಿಕ್ ​​ನಲ್ಲಿ ಕಂಚಿನ ಪದಕ ಗೆದ್ದ 58 ವರ್ಷದ ಕ್ರೀಡಾಪಟು

ಒಲಂಪಿಕ್ ​ನಲ್ಲಿ ಪದಕ ಸಂಪಾದಿಸೋದು ಅಂದರೆ ಸುಲಭದ ಮಾತಲ್ಲ. ವರ್ಷಗಳ ಕಠಿಣ ಅಭ್ಯಾಸ, ಶ್ರದ್ಧೆ ಇದ್ದರೆ ಮಾತ್ರ ಈ ಪದಕ ಒಲಿಯೋಕೆ ಸಾಧ್ಯ.

ಘಟಾನುಘಟಿ ಆಟಗಾರರಿಂದಲೇ ತುಂಬಿರುವ ಈ ಕ್ರೀಡಾಕೂಟದಲ್ಲಿ 58 ವರ್ಷದ ಆಟಗಾರ ಪದಕ ಸಂಪಾದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

7 ಬಾರಿ ಒಲಿಂಪಿಯನ್​ ಆಗಿರುವ ಕುವೈತ್​ನ ಅಬ್ದುಲ್ಲ ಅಲ್ರಾಶಿದಿ ತಮ್ಮ 58ನೇ ವಯಸ್ಸಿಗೆ ಪುರುಷರ ಸ್ಕೀಟ್​ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಸಂಪಾದಿಸಿದ್ದಾರೆ. ಮಾತ್ರವಲ್ಲದೇ 2024ರಲ್ಲಿ ಪ್ಯಾರಿಸ್​ನಲ್ಲಿ ಚಿನ್ನದ ಬೇಟೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಈ ವೇಳೆಗೆ ಅವರು 60 ವರ್ಷ ದಾಟಲಿದ್ದಾರೆ.

ನನಗೆ ಈಗ 58 ವರ್ಷ ವಯಸ್ಸು. ನಾನು ಎಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯನಾದ ಶೂಟರ್​ ಆಗಿದ್ದೇನೆ. ಹೀಗಾಗಿ ಈ ಕಂಚಿನ ಪದಕವು ನನಗೆ ಚಿನ್ನದ ಪದಕಕ್ಕೆ ಸಮನಾಗಿದೆ. ಈ ಪದಕವು ನನಗೆ ತುಂಬಾನೇ ಖುಷಿ ನೀಡಿದೆ. ಆದರೆ ಮುಂದಿನ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಸಂಪಾದಿಸುತ್ತೇನೆ ಎಂದು ಅಬ್ದುಲ್ಲ ಹೇಳಿದ್ದಾರೆ.

ಚಿನ್ನದ ಪದಕವನ್ನ ಸಂಪಾದಿಸುವ ಅದೃಷ್ಟ ನನಗೆ ಇರಲಿಲ್ಲ. ಆದರೆ ಈ ಕಂಚಿನ ಪದಕವೂ ನನಗೆ ಖುಷಿ ಕೊಟ್ಟಿದೆ. ಅಲ್ಲಾನ ಸಹಾಯದಿಂದ ನಾನು 2024ರ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಚಿನ್ನ ಸಂಪಾದಿಸುತ್ತೇನೆ. ಆಗ ನನಗೆ 61 ವರ್ಷ ಪ್ರಾಯವಾಗಿರಲಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...