alex Certify ಪ್ರವಾಹದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಒಲಂಪಿಕ್ ಪದಕ ವಿಜೇತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಒಲಂಪಿಕ್ ಪದಕ ವಿಜೇತ

Hyderabad Flood Effect: Olympic Medallist Gagan Narang Incurs Loss in Crores after Guns, Rifles Drown

ಹೈದರಾಬಾದ್​ನಲ್ಲಿ ಸುರಿಯುತ್ತಿರೋ ಭಾರೀ ಮಳೆ ಜನಜೀವನವನ್ನೇ ಅಸ್ತವ್ಯಸ್ತ ಮಾಡಿಬಿಟ್ಟಿದೆ. ಇದೀಗ ವರುಣನ ಆರ್ಭಟದ ಬಿಸಿ ಒಲಿಂಪಿಕ್​ ಮೆಡಲಿಸ್ಟ್ ಗಗನ್​ ನಾರಂಗ್​ಗೂ ತಟ್ಟಿದೆ. ತಿರುಮಲಗಿರಿಯಲ್ಲಿ ಶೂಟಿಂಗ್​ ಅಕಾಡಮಿ ನಡೆಸುತ್ತಿದ್ದ ಗಗನ್​ ಪ್ರವಾಹದಿಂದಾಗಿ ತಮ್ಮ ಗನ್​, ರೈಫಲ್​ ಹಾಗೂ ಡ್ರೋಣ್​ಗಳನ್ನ ಕಳೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಗಗನ್​ ಜರ್ಮನಿಯಿಂದ ಈ ರೈಫಲ್ಸ್​ಗಳನ್ನ ಖರೀದಿ ಮಾಡಿದ್ರು.

ಈ ಸಂಬಂಧ ಮಾತನಾಡಿದ ಗಗನ್​ ನಾರಂಗ್​, ಮಳೆ ಆರ್ಭಟ ಜೋರಾಗ್ತಿದ್ದಂತೆಯೇ ನಾನು ನನ್ನ ಅಕಾಡೆಮಿ ಕ್ಲೋಸ್​ ಮಾಡಿದ್ದೆ. ಅಕಾಡೆಮಿಯ ಶಟರ್​ ಕೂಡ ಓಪನ್​​ ಮಾಡಿರಲಿಲ್ಲ. ಆದ್ರೆ ನೀರು ಒಳಗೆ ನುಗ್ಗಿದ್ದು ಎಲ್ಲಾ ರೈಫಲ್​ಗಳು ಹಾಳಾಗಿವೆ ಅಂತಾ ಬೇಸರ ಹೊರಹಾಕಿದ್ರು.

ಪ್ರವಾಹದಿಂದಾಗಿ ಗಗನ್​ ನಾರಂಗ್​​ಗೆ ಸೇರಿದ 50 ಪಿಸ್ತೂಲ್​ ಹಾಗೂ 50 ರೈಫಲ್​ಗಳು ಜಲಾವೃತವಾಗಿದ್ದು ಬರೋಬ್ಬರಿ 1.30 ಕೋಟಿ ರೂಪಾಯಿ ಲಾಸ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...