alex Certify ಕ್ರಿಕೆಟ್ ಪಂದ್ಯದ ವೇಳೆ ಡ್ರೋನ್ ಬಳಸಲು ಬಿಸಿಸಿಐಗೆ ಕೇಂದ್ರ ಸರ್ಕಾರದಿಂದ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪಂದ್ಯದ ವೇಳೆ ಡ್ರೋನ್ ಬಳಸಲು ಬಿಸಿಸಿಐಗೆ ಕೇಂದ್ರ ಸರ್ಕಾರದಿಂದ ಅನುಮತಿ

ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರದ ವೇಳೆ ಡ್ರೋನ್ ಕ್ಯಾಮೆರಾಗಳನ್ನು ಬಳಸಲು ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಈ ಮೂಲಕ ಪಂದ್ಯದ ನೇರ ಪ್ರಸಾರದ ಪಕ್ಷಿ ನೋಟವನ್ನು ವೀಕ್ಷಕರು ಎಂಜಾಯ್ ಮಾಡಬಹುದಾಗಿದೆ.

2021ರ ವರ್ಷದಲ್ಲಿ ಆಯೋಜಿಸಲಿರುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಡ್ರೋನ್ ಕ್ಯಾಮೆರಾಗಳ ಬಳಕೆಗೆ ಅನುಮತಿ ಕೋರಿ ವಿಮಾನಯಾನ ಸಚಿವಾಲಯಕ್ಕೆ ಬಿಸಿಸಿಐ ಪತ್ರ ಬರೆದಿದೆ. ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವಾಲಯ ಷರತ್ತುಬದ್ಧ ಅನುಮತಿ ಕೊಟ್ಟಿದೆ.

ಕ್ರಿಕೆಟ್: ಕಪಿಲ್, ಕುಂಬ್ಳೆ ಸಾಲಿಗೆ ಸೇರಿದ ಇಶಾಂತ್

“ಡ್ರೋನ್‌ಗಳ ಬಳಕೆ ದೇಶದಲ್ಲಿ ವ್ಯಾಪಕವಾಗಿ ಪಸರಿಸುತ್ತಿದೆ. ಕೃಷಿ, ಗಣಿಗಾರಿಕೆ, ಆರೋಗ್ಯಸೇವೆ, ವಿಪತ್ತು ನಿರ್ವಹಣೆಗಳಿಂದ ಕ್ರೀಡೆ ಹಾಗೂ ಮನರಂಜನೆಗಳಿಗೆ ಬಳಸುವವರೆಗೂ ಅನೇಕ ವಿಷಯಗಳಲ್ಲಿ ಡ್ರೋನ್ ಬಳಕೆ ವ್ಯಾಪಕವಾಗುತ್ತಿದೆ. ದೇಶದಲ್ಲಿ ಡ್ರೋನ್‌ಗಳ ವಾಣಿಜ್ಯೋದ್ದೇಶದ ಬಳಕೆಗೆ ಅನುಮತಿ ಕೊಡುವ ಸರ್ಕಾರದ ಉದ್ದೇಶಗಳ ಅಡಿಯಲ್ಲಿ ಈ ಅನುಮತಿ ಕೊಡಲಾಗಿದೆ. ಈ ಅನುಮತಿಯು ಡಿಸೆಂಬರ್‌ 31ರವರೆಗೂ ಚಾಲ್ತಿಯಲ್ಲಿ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...