alex Certify ಖ್ಯಾತ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ…. ಕಾರಣ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ…. ಕಾರಣ ಗೊತ್ತಾ….?

ಮುಂಬೈ: ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ ಆರ್ ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪಾಂಡ್ಯ ವಿರುದ್ಧ ಅಕ್ರಮ ಚಿನ್ನ ಸಾಗಾಟ ಆರೋಪ ಕೇಳಿಬಂದಿದ್ದು, ಯುಎಇಯಿಂದ ಮುಂಬೈ ವಿಮಾನ ನಿಕ್ದಾಣಕ್ಕೆ ಬಂದ ಕೃಣಾಲ್ ಪಾಂಡ್ಯ ಅವರನ್ನು ಡೈರೆಕ್ಟ್ ಆಫ್ ರೆವೆನ್ಯೂ ಇಂಟಲಿಜನ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅವರ ಬಳಿ ನಿರ್ದಿಷ್ಟ ಪ್ರಮಾಣದ ಚಿನ್ನವಿರುವುದು ಪತ್ತೆಯಾಗಿದೆ. ಆದರೆ ಇದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೃಣಾಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇನ್ನು ಪಾಂಡ್ಯ ಅವರ ಬಳಿ 75 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...