alex Certify BREAKING: ಏಷ್ಯನ್ ಗೇಮ್ಸ್ ನಲ್ಲಿ ಮುಂದುವರೆದ ಪದಕ ಬೇಟೆ: ಮಹಿಳೆಯರ 5000 ಮೀ ಓಟದಲ್ಲಿ ಪಾರುಲ್ ಗೆ ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಏಷ್ಯನ್ ಗೇಮ್ಸ್ ನಲ್ಲಿ ಮುಂದುವರೆದ ಪದಕ ಬೇಟೆ: ಮಹಿಳೆಯರ 5000 ಮೀ ಓಟದಲ್ಲಿ ಪಾರುಲ್ ಗೆ ಚಿನ್ನ

ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ ನ ಮಹಿಳೆಯರ 5000 ಮೀಟರ್ ಓಟದಲ್ಲಿ ಭಾರತದ ಪಾರುಲ್ ಚೌಧರಿ ಅವರು ಪ್ರಚಂಡ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಸೋಮವಾರ ನಡೆದ ಮಹಿಳೆಯರ 3000 ಮೀಟರ್ ಸ್ಟೀಪಲ್‌ ಚೇಸ್‌ ನಲ್ಲಿ ಬೆಳ್ಳಿ ಗೆದ್ದ ನಂತರ ಪಾರುಲ್‌ ಗೆ ಇದು ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕವಾಗಿದೆ.

ಪುರುಷರ 800 ಮೀಟರ್‌ ಓಟದಲ್ಲಿ ಮಹಮ್ಮದ್‌ ಅಫ್ಸಲ್‌ ಪುಳಿಕ್ಕಲಕತ್‌ 1:48.43 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು.

ಇದಕ್ಕೂ ಮುನ್ನ ಮಹಿಳೆಯರ 400 ಮೀಟರ್‌ ಹರ್ಡಲ್ಸ್‌ನಲ್ಲಿ 25 ವರ್ಷದ ವಿತ್ಯಾ ರಾಮರಾಜ್‌ 55.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...