alex Certify ಮಗಳ ಹೆಸರನ್ನೇ ಮೊದಲು ಬರೆಸಿದ ವಿರಾಟ್​ ಕೊಹ್ಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಹೆಸರನ್ನೇ ಮೊದಲು ಬರೆಸಿದ ವಿರಾಟ್​ ಕೊಹ್ಲಿ..!

 

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ – ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ ಅನ್ನೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸದ್ಯ ಇಂಗ್ಲೆಂಡ್​ ವಿರುದ್ಧ ಟಿ 20 ಸರಣಿಯಲ್ಲಿ ಬ್ಯುಸಿ ಇರುವ ವಿರಾಟ್​ ಕೊಹ್ಲಿ ಹಾಗೂ ಹಾರ್ದಿಕ್​ ಪಾಂಡ್ಯಾ ದಂಪತಿ ತಮ್ಮ ಮಕ್ಕಳ ಸಮೇತ ಹೋಟೆಲ್​ನಲ್ಲಿ ನೆಲೆಸಿದ್ದಾರೆ.

ಅಹಮದಾಬಾದ್​ನ ಯಾವ ಹೋಟೆಲ್​​ನಲ್ಲಿ ಈ ಪರಿವಾರ ನೆಲೆಸಿದ್ಯೋ ಅಲ್ಲಿ ಅವರಿಗಾಗಿ ವಿಶೇಷ ವ್ಯವಸ್ಥೆಯನ್ನ ಮಾಡಲಾಗಿದೆ. ವಿರಾಟ್​ ಕೊಹ್ಲಿ ತಮ್ಮ ಹೋಟೆಲ್​ ರೂಂನ ನೇಮ್​ ಪ್ಲೇಟ್​​ನಲ್ಲಿ ತಮ್ಮ ಮಗಳು ವಮಿಕಾಳ ಹೆಸರನ್ನ ಎಲ್ಲಕ್ಕಿಂತ ಮೊದಲು ಬರೆಸಿದ್ದಾರೆ. ಆದರೆ ಹಾರ್ದಿಕ್​ ಪಾಂಡ್ಯಾ ತಮ್ಮ ಹಾಗೂ ಪತ್ನಿ ನತಾಶಾ ಹೆಸರಿನ ಬಳಿಕ ಅಗಸ್ತ್ಯನ ಹೆಸರನ್ನ ಬರೆಸಿದ್ದಾರೆ.

ಟೀಂ ಇಂಡಿಯಾ ಆಟಗಾರರು ನೆಲೆಸಿರುವ  ಹೋಟೆಲ್​ನಲ್ಲಿ ಆಟಗಾರರಿಗಾಗಿ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿದೆ. ಯಾವ ಕ್ರಿಕೆಟ್​ ಆಟಗಾರ ದಂಪತಿಗೆ ಮಗು ಇದೆಯೋ ಅಂತಹ ರೂಮ್​ಗಳಲ್ಲಿ ಮಕ್ಕಳಿಗೆ ಆಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಉಳಿದ ಆಟಗಾರ ದಂಪತಿ ಬಗ್ಗೆ ಮಾತನಾಡೋದಾದ್ರೆ ಚಹಲ್​ – ಧನಶ್ರೀ ಹಾಗೂ ಸೂರ್ಯಕುಮಾರ್​ – ದೇವಿಷಾ ಕೂಡ ಇಲ್ಲಿ ತಂಗಿದ್ದಾರೆ. ಇವರಿಗೂ ಕೂಡ ಹೋಟೆಲ್​ ಕೋಣೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...