alex Certify ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯ ಸೋತ ಬಳಿಕ ಫುಲ್ ಟ್ರೋಲ್ ಆದ ಅನುಷ್ಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯ ಸೋತ ಬಳಿಕ ಫುಲ್ ಟ್ರೋಲ್ ಆದ ಅನುಷ್ಕಾ

ಆಸ್ಟ್ರೇಲಿಯಾದ ಅಡಿಲೆಡ್ ನಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಅತಿಥೇಯ ಆಸ್ಟ್ರೇಲಿಯಾದ ಎದುರು 8 ವಿಕೆಟ್ ಗೆ ಶರಣಾಗಿದೆ. ಕೊಹ್ಲಿ ಹಾಗೂ ತಂಡದವರ ಆಟದ ವಿರುದ್ದ ದೇಶದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.‌

ಕೇವಲ ಕೊಹ್ಲಿ ಮಾತ್ರವಲ್ಲ ಅವರ ಗರ್ಭಿಣಿ ಪತ್ನಿ, ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನೂ ಸೇರಿಸಿಕೊಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮಿಮ್ ಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವಿರಾಟ್ ಸೋತಾಗ ಅವರ ಪತ್ನಿಯ ಹೆಸರನ್ನೂ ಎಳೆತರಲಾಗಿತ್ತು. ಅನುಷ್ಕಾ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕೆಲವರು ಜಾಲತಾಣದಲ್ಲಿ ಅನುಷ್ಕಾ ಬೆಂಬಲಕ್ಕೆ ನಿಂತಿದ್ದಾರೆ. ಕೊಹ್ಲಿ ಕ್ರಿಕೆಟ್ ವಿಚಾರದಲ್ಲಿ ಶರ್ಮಾ ಅವರನ್ನು ಎಳೆತರುವುದು ಸರಿಯಲ್ಲ ಎಂದು ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...