alex Certify ಮೊದಲ ಟಿ20: ಭಾರತ ಶುಭಾರಂಭ, ವಿಂಡೀಸ್ ವಿರುದ್ಧ 6 ವಿಕೆಟ್ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಟಿ20: ಭಾರತ ಶುಭಾರಂಭ, ವಿಂಡೀಸ್ ವಿರುದ್ಧ 6 ವಿಕೆಟ್ ಜಯ

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿದೆ.

ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಪರವಾಗಿ ಬ್ರೆಂಡನ್ ಕಿಂಗ್ 4, ಕೈಲ್ ಮೇಯರ್ಸ್ 31, ನಿಕೋಲಸ್ ಪೂರನ್ 61, ರೋಸ್ಟನ್ ಚೇಸ್ 4, ರೊವ್ ಮನ್ ಪೊವೆಲ್ 2, ಅಕೀಲ್ ಹೊಸೈನ್ 10, ಕೀರಾನ್ ಪೊಲಾರ್ಡ್ ಅಜೇಯ 24, ಒಡೇನ್ ಸ್ಮಿತ್ 4 ರನ್ ಗಳಿಸಿದರು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಭಾರತದ ಪರವಾಗಿ ರವಿ ಬಿಷ್ಣೋಯಿ 2, ಯಜುವೇದ್ರ ಚಾಹಲ್ 1, ದೀಪಕ್ ಚಾಹರ್ 1, ಭುವನೇಶ್ವರ ಕುಮಾರ್ 1, ಹರ್ಷಲ್ ಪಟೇಲ್ 2 ವಿಕೆಟ್ ಗಳಿಸಿದ್ದಾರೆ.

ಭಾರತ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆಲವು ಕಂಡಿದೆ. ರೋಹಿತ್ ಶರ್ಮಾ 40, ಇಶಾನ್ ಕಿಶನ್ 35, ವಿರಾಟ್ ಕೊಹ್ಲಿ 17, ರಿಷಬ್ ಪಂತ್ 8, ಸೂರ್ಯಕುಮಾರ್ ಯಾದವ್ ಅಜೇಯ 34, ವೆಂಕಟೇಶ್ ಅಯ್ಯರ್ ಅಜೇಯ 24 ರನ್ ಗಳಿಸಿದರು. ವಿಂಡೀಸ್ ಪರ ರೋಸ್ಟನ್ ಚೇಸ್ 2, ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...