alex Certify ನಿವೃತ್ತಿ ಘೋಷಿಸಿದ ಗಂಟೆಯಲ್ಲಿ ಧೋನಿಗೆ ಸಿಕ್ತು ದೊಡ್ಡ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿ ಘೋಷಿಸಿದ ಗಂಟೆಯಲ್ಲಿ ಧೋನಿಗೆ ಸಿಕ್ತು ದೊಡ್ಡ ಆಫರ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಎಸ್ ಧೋನಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಘೋಷಣೆಯ ಒಂದು ಗಂಟೆಯ ಲ್ಲೇ ಅವರಿಗೆ ದೊಡ್ಡ ಆಫರ್ ಸಿಕ್ಕಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ದಿ ಹಂಡ್ರೆಡ್ ಲೀಗ್ ತಂಡದ ಮುಖ್ಯ ತರಬೇತುದಾರ ಶೇನ್ ವಾರ್ನ್ ತಂಡದೊಂದಿಗೆ ಆಡುವ ಆಫರ್ ನೀಡಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.

ದಿ ಹಂಡ್ರೆಡ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪ್ರಾಯೋಗಿಕ ಪಂದ್ಯಾವಳಿಯಾಗಿದೆ. ಈ ವರ್ಷ ಎಂಟು ತಂಡಗಳೊಂದಿಗೆ ಪಂದ್ಯಾವಳಿ ಪ್ರಾರಂಭವಾಗಬೇಕಿತ್ತು. ಕೊರೊನಾ ಕಾರಣದಿಂದಾಗಿ ಪಂದ್ಯಾವಳಿಯನ್ನು ಮುಂದೂಡಲಾಗಿದೆ.

ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಐಪಿಎಲ್ ನಲ್ಲಿ ಅವ್ರ ಆಟವನ್ನು ಅಭಿಮಾನಿಗಳು ನೋಡಬಹುದು. ಹಾಗೆ ಫ್ರಾಂಚೈಸಿ ಆಧಾರಿತ ಪಂದ್ಯಗಳಲ್ಲಿ ಧೋನಿ ಆಟ ಮುಂದುವರೆಸಲಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...